india win ಶಮಿ, ಜಡೇಜಾ ದಾಳಿಗೆ ಆಫ್ರಿಕಾ ತತ್ತರ: ಭಾರತಕ್ಕೆ 203 ರನ್ ಜಯ

india win
jubiliant indian team

india win ಭಾರತ 502ಡಿ ಮತ್ತು 323ಡಿ: ದಕ್ಷಿಣ ಆಫ್ರಿಕಾ 431 ಹಾಗೂ 191

ವಿಶಾಖಪಟ್ಟಣ: ಬಾಲಂಗೋಚಿಗಳ ಪ್ರತಿರೋಧದ ನಡುವೆಯೂ ಭಾರತ ( india win) ತಂಡವು ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.

ಇದನ್ನೂ ಓದಿ: ರೋಹಿತ್ ಮತ್ತೊಂದು ಶತಕ, ಭಾರತಕ್ಕೆ ಜಯದ ತವಕ

ಪಂದ್ಯ ಗೆಲ್ಲಲು ಐದನೇ ದಿನವಾದ ಭಾನುವಾರ 384 ರನ್ ಗಳಿಸಬೇಕಾದ ಬೆಟ್ಟದಂಥಾ ಸವಾಲು ಎದುರಿಸಿದ ಆಫ್ರಿಕಾ ಶಮಿ ಹಾಗು ಜಡೇಜಾ ಅವರ ಅದ್ಭುತ ಕೈಚಳಕದ ಮುಂದೆ ನಿಬ್ಬೆರಗಾಗಿ ಶರಣೆಂದಿತು. ಕೇವಲ 191 ರನ್ನುಗಳಿಗೆ ಆಫ್ರಿಕೆಯ ಹೋರಾಟ ಮುರುಟಿ ಭಾರತಕ್ಕೆ 203 ರನ್ನುಗಳ ಭಾರೀ ಜಯ ಸಂದಾಯವಾಯಿತು.

ಒಂದು ವಿಕೆಟ್ ನಷ್ಟಕ್ಕೆ 11 ರನ್ನುಗಳಿಂದ ದಿನದಾಟ ಆರಂಭಿಸಿದ ಆಫ್ರಿಕಾ ದಾಂಡಿಗರು ಭಾರತದ ಸತತ ಪರಿಣಾಮಕಾರಿ ದಾಳಿ ಮುಂದೆ ತಿಣುಕಾಡಿದರು. ಆರಂಭಿಕ ಮಾರ್ಕರಮ್, ಬಾಲಂಗೋಚಿಗಳಾದ ಮುತ್ತುಸ್ವಾಮಿ ಮತ್ತು ಪೀಟ್ ಮಾತ್ರ ಕೊಂಚ ಪ್ರತಿರೋಧ ತೋರಿದರು.

ಪರಿಸ್ಥಿತಿಯ ಪೂರ್ಣ ಲಾಭ ಪಡೆದು ಅತ್ಯಂತ ಪರಿಣಾಮಕಾರಿ ದಾಳಿ ಸಂಘಟಿಸಿದ ಮೊಮದ್ ಶಮಿ ಕೇವಲ 35 ರನ್ ನೀಡಿ 5 ಮಹತ್ವದ ವಿಕೆಟ್ ಹಾರಿಸಿದರೇ, ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಕಿತ್ತರು.

ದಕ್ಷಿಣ ಆಫ್ರಿಕಾ ಪರ ಮಾರ್ಕರಮ್ 39 ರನ್ ಮಾಡಿದರೆ ಚೊಚ್ಚಲ ಪಮದ್ಯವಾಡುತ್ತಿರುವ ಮುತ್ತುಸ್ವಾಮಿ ಅಜೇಯ 49 ಹಾಗೂ ಡೇನ್ ಪೀಟ್ 56 ರನ್ ಗಳಿಸಿದರು. ಈ ಜಯದೊಂದಿಗೆ ಭಾರತ ಸರಣಿಯಲ್ಲಿ 1-0 ಪಂದ್ಯಗಳ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...