india sweep ಟೆಸ್ಟ್ ಚಾಂಪಿಯನ್‌ಶಿಪ್ 120 ಅಂಕ ಬಾಚಿದ ಕೊಹ್ಲಿ ಬಾಯ್ಸ್

india sweep
indian cricket team with trophy

india sweep ವಿಂಡೀಸ್ ವಿರುದ್ಧ 2ನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತಕ್ಕೆ 257 ರನ್ ಜಯ

ಜಮೈಕಾ: ಕೌಟುಂಬಿಕ ಕಲಹಕ್ಕಾಗಿ ಪೊಲೀಸರಿಮದ ಬಂಧನ ಭೀತಿಯಲ್ಲಿರುವ ( india sweep ) ಮೊಹಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಮತ್ತು ಕೊನೆಯ ಟೆಸ್ಟ್ ಪಂದ್ಯ ಗೆದ್ದು ಸರಣಿಯನ್ನು ಗುಡಿಸಿ ಸಾರಿಸಿದೆ.

ಇದನ್ನೂ ಓದಿ: ಜಮೈಕಾ ಟೆಸ್ಟ್: ಜಯದ ಹಾದಿಯಲ್ಲಿ ಕೊಹ್ಲಿ ಪಡೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ತನ್ನ ಮೊದಲ ಅಗ್ನಿಪರೀಕ್ಷೆ ಗೆದ್ದಿರುವ ಭಾರತ ತಂಡವು ಸರಣಿಯಲ್ಲಿ ಪಣಕ್ಕಿದ್ದ 120 ಅಂಕಗಳನ್ನು ಬಾಚಿಕೊಂಡು ಸರಿ ದಿಕ್ಕಿನಲ್ಲಿ ಸಾಗಿದೆ.

ಪಂದ್ಯ ಉಳಸಿಕೊಳ್ಳಲು ಆರು ಅವಧಿಗೆ ಬ್ಯಾಟ್ ಮಾಡಬೇಕಿದ್ದ ವೆಸ್ಟ್ ಇಂಡೀಸ್ ತಂಡವು ಆತುರಾತುರವಾಗಿ ವಿಕೆಟ್ ಕಳೆದುಕೊಂಡು ಪಂದ್ಯ ಹಾಗೂ ಸರಣಿಯನ್ನು ಬಾರತಕ್ಕೆ ಒಪ್ಪಿಸಿ ಶರಣಾಗತಿ ಹೊಂದಿತು.

ಪಂದ್ಯ ಗೆಲ್ಲಲು 268 ರನ್ ಗಳಿಸಬೇಕಾದ ಗುರುತರ ಸವಾಲು ಪಡೆದ ವಿಂಡೀಸ್ ತಂಡವು ತನ್ನ ಎರಡನೇ ಸರದಿಯಲ್ಲಿ ಕೇವಲ 210 ರನ್ನುಗಳಿಗೆ ಸರ್ವಪತನ ಕಂಡಿತು. ಶರ್ಮಾನ್ ಬ್ರೂಕ್ಸ್ 50, ನಾಯಕ ಹೋಲ್ಡರ್‍ 38 ಮತ್ತು ಬ್ಲಾಕ್‌ವುಡ್ 38 ರನ್ ಗಳಿಸಿದ್ದು ಬಿಟ್ಟರೇ ಉಳಿದ ದಾಂಡಿಗರು ದಂಡವೆನಿಸಿದರು.

ಮೊದಲ ಟೆಸ್ಟ್ ಪಂದ್ಯವನ್ನು ಲೀಲಾಜಾಲವಾಗಿ ಗೆದ್ದುಕೊಂಡಿದ್ದ ಭಾರತ ಎರಡನೇ ಟೆಸ್ಟ್ ಗೆಲ್ಲುವ ಮೂಲಕ ವಿಂಡೀಸ್ ನೆಲದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಹೆಗ್ಗಳಿಕೆ ತನ್ನದಾಗಿಸಿಕೊಂಡಿತು.

ಮೊದಲ ಇನ್ನಿಂಗ್ಸ್ ನಲ್ಲಿ ಹನುಮ ವಿಹಾರಿ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ 416 ಗಳಿಸಿದ ಭಾರತ, ಆ ಬಳಿಕ ಜಸ್‌ಪ್ರೀತ್ ಬುಮ್ರಾ ಪಡೆದ ಹ್ಯಾಟ್ರಿಕ್ ವಿಕೆಟ್ ಬಲದಿಂದ ಆತಿಥೇಯ ವಿಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿತ್ತು.

ಮೊದಲ ಸರದಿಯಲ್ಲಿ ಶತಕ ಬಾರಿದ್ದೇ ಅಲ್ಲದೇ ಎರಡನೇ ಸರದಿಯಲ್ಲಿ ಅಜೇಯ ಅರ್ಧ ಶತಕ ದಾಖಲಿಸಿದ ಹನುಮ ವಿಹಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...