india pile ರಾಹುಲ್-ಧವನ್ ಯುಗಳಕ್ಕೆ ತಲೆಬಾಗಿದ ಲಂಕೆ

india pile
rahul and dhawan

india pile ಭಾರತ 20 ಓವರುಗಳಲ್ಲಿ 201/6, ಶ್ರೀಲಂಕಾ 15.5 ಓವರುಗಳಲ್ಲಿ 123

ಪುಣೆ: ಆರಂಭಿಕ ಆಟಗಾರರಾದ (india pile) ರಾಹುಲ್ ಹಾಗೂ ಶಿಖರ್ ಧವನ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕೆಯನ್ನು 78 ರನ್ನುಗಳಿಂದ ಬಗ್ಗುಬಡಿದು ಮೂರು ಪಂದ್ಯಗಳ ಸರಣಿಯನ್ನು 2-0 ಪಂದ್ಯಗಳಿಂದ ಗೆದ್ದುಕೊಂಡಿದೆ. ಸರಣಿಯ ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು

ಇದನ್ನೂ ಓದಿ: 2nd t20 ಮಿಂಚಿದ ಕನ್ನಡಿಗ ರಾಹುಲ್, ಸೈನಿ; ಗೆದ್ದು ಬಿಗಿದ ಭಾರತ

ಸರಣಿ ಸಮ ಮಾಡಿಕೊಳ್ಳಲು ಭಾರತ ೆಸೆದ 202 ರನ್ನುಗಳ ಸವಾಲು ಬೆಂಬತ್ತಿದ ಲಂಕ್ಎ 15.5. ಓವರುಗಳಲ್ಲಿ ಕೇವಲ 123 ರನ್ನುಗಳಿಗೆ ಮುದುಡಿಕೊಂಡಿತು. ಧನಂಜಯ ಡಿಸಿಲ್ವಾ 57 ಮತ್ತು ಅನುಭವಿ ಮ್ಯಾಥ್ಯೂಸ್ 31 ಹೊರತಾಗಿ ಉಳಿದವರಾರೂ ಎರಡಂಕಿ ಮೊತ್ತವನ್ನು ತಲುಪಲಿಲ್ಲ. ಭಾರತದ ಪರ ಸರಣಿ ಪುರುಷ ನವದೀಪ್ ಸೈನಿ ಮೂರು ವಿಕೆಟ್ ಕಿತ್ತು ಯಶಸ್ವಿ ದಾಳಿಕಾರ ಎನಿಸಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಭಾರತದ ಈ ಪ್ರದರ್ಶನದಲ್ಲಿ ಗಮನ ಸೆಳೆದವರೆಂದರೇ ಆರಂಭಿಕ ಜೋಡಿ.

ಮೊದಲ 10 ಓವರುಗಳವರೆಗೂ ವಿಕೆಟ್ ಕಾಯ್ದುಕೊಂಡ ರಾಹುಲ್ ಹಾಗೂ ಶಿಖರ್ ಧವನ್ ಈ 60 ಎಸೆತಗಳಲ್ಲಿ 97 ರನ್ ಜೊತೆಯಾಟ ನಿಭಾಯಿಸಿ ದೊಡ್ಡ ಮೊತ್ತಕ್ಕೆ ವೇದಿಕೆ ಕಲ್ಪಿಸಿದರು.

ಲಂಕಾದ ದಾಳಿಯನ್ನು ಬಲುಬೇಗ ತಮ್ಮಳತೆಗೆ ತೆಗೆದುಕೊಂಡ ಇವರಿಬ್ಬರೂ ತೀರಾ ಸಲೀಸಾಗಿ ರನ್ ಗಳಿಕೆಯ ಕಾರ್ಯವನ್ನು ಮುಂದುವರಿಸಿದರು. ಆದರೆ ಅರ್ಧ ಶತಕ ಆಗುತ್ತಿದ್ದಂತೆಯೇ ಇಬ್ಬರೂ ವಿಕೆಟ್ ಕೈಚೆಲ್ಲಿದರು.

ರಾಹುಲ್ 54 ರನ್ ಮಾಡಿದರೇ ಧವನ್ 52 ರನ್ ಮಾಡಿ ನಿರ್ಗಮಿಸಿದರು. ಇಬ್ಬರೂ ತಲಾ 36 ಎಸೆತ ಎದುರಿಸಿದರು. ಉಳಿದಂತೆ ನಾಯಕ ಕೊಹ್ಲಿ 26, ಮನೀಶ್ ಪಾಂಡೆ 31 ಮತ್ತು ಠಾಕೂರ್ 22 ರನ್ ಮಾಡಿದರು. ಲಂಕಾ ಪರ ಸಾಂಡಕನ್ 35 ರನ್ ನೀಡಿ 3 ವಿಕೆಟ್ ಕಿತ್ತರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...