icc awards ರೋಹಿತ್‌, ಕೊಹ್ಲಿಗೆ ಐಸಿಸಿ ಪ್ರಶಸ್ತಿ ಗರಿ

icc awards
roit sharma and virat kohli

icc awards ರೋಹಿತ್‌ ವರ್ಷದ ಏಕದಿನ ಆಟಗಾರನಾದರೇ, ಕೊಹ್ಲಿಗೆ ವಿಶೇಷ ಗೌರವ

ದುಬೈ: ಐಸಿಸಿ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದ ಭಾರತದ ( icc awards ) ಇಬ್ಬರಿಗೆ ಉನ್ನತ ಗೌರವ ದೊರೆತಿದೆ. ನಾಯಕ ವಿರಾಟ್ ಕೊಹ್ಲಿಗೆ ಕ್ರೀಡಾ ಸ್ಫೂರ್ತಿಗಾಗಿ ಗೌರವ ಸಂದಾಯವಾಗಿದ್ದರೇ ರೋಹಿತ್ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗ ಎಂಬ ರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: 50ನೇ ಶತಕ ಬಾರಿಸಿ ದಿಗ್ಗಜರ ಪಟ್ಟಿ ಸೇರಿದ ಪೂಜಾರ

ತವರಿನಲ್ಲಿ ಇಂಗ್ಲೆಂಡ್ ತಂಡಕ್ಕೆ ವಿಶ್ವ ಚಾಂಪಿಯನ್‌ ಗರಿ ಮುಡಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸ್ಫೋಟಕ ಆಲ್ರೌಂಡರ್‍ ಬೆನ್ ಸ್ಟೋಕ್ಸ್‌ ಅವರಿಗೆ ಸರ್‍ ಗಾರ್ಫೀಲ್ಡ್ ಸೋಬರ್ಸ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (59 ವಿಕೆಟ್) ವರ್ಷದ ಶ್ರೇಷ್ಠ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದರೆ, ಭಾರತದ ಯುವ ಪ್ರತಿಭೆ ದೀಪಕ್ ಚಾಹರ್ ಟಿ-20 ಕ್ರಿಕೆಟ್‍ನ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಕಳೆದ ವರ್ಷ ಅದ್ಭುತ ಲಯದಲ್ಲಿದ್ದ ರೋಹಿತ್ ಶರ್ಮಾ 28 ಏಕದಿನ ಪಂದ್ಯಗಳಲ್ಲಿ 1409 ರನ್ ಸಂಪಾದಿಸಿದ್ದರು. ಇದರಲ್ಲಿ ವಿಶ್ವಕಪ್‌ನ 9 ಪಂದ್ಯಗಳಲ್ಲು ದಾಖಲೆಯೆ ಐದು ಶತಕ ಸೇರಿದಂತೆ ಗಳಿಸಿದ 648 ರನ್‌ಗಳು ಸಹ ಸೇರಿವೆ. ಇಂಗ್ಲೆಂಡಿನ ಅಂಪೈರ್ ರಿಚರ್ಡ್ ಇಲ್ಲಿಂಗ್‍ವರ್ತ್‍ಗೆ ಉತ್ತಮ ಅಂಪೈರ್‍ ಆಗಿ ಹೊರಹೊಮ್ಮಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...