hunsur bypoll ಚನ್ನಪಟ್ಟಣದಿಂದ ಹುಣಸೂರಿಗೆ ’ಸೈನಿಕ’ ಶಿಫ್ಟ್

hunsur bypoll
former minister yogeshwar

hunsur bypoll ಹುಣಸೂರಿನಿಂದ ಸ್ಪರ್ಧೆಗೆ ಯೋಗೇಶ್ವರ್ ಸಜ್ಜು

ಬೆಂಗಳೂರು: ತಮ್ಮ ಕರ್ಮಭೂಮಿ ಚನ್ನಪಟ್ಟಣದ ( hunsur bypoll ) ಕೊಟೆ ಕಳೆದುಕೊಂಡ ’ಸೈನಿಕ’ ಈಗ ಬೇರೊಮದು ಸಂಸ್ಥಾನದ ಮೇಲೆ ಕಣ್ಣಿಟ್ಟದ್ದಾನಾ? ಹೀಗೊಂದು ಪ್ರಶ್ನೆ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಜೆಡಿಎಸ್ ಜೊತೆ ಬಿಜೆಪಿ ದೋಸ್ತಿ ಮಾತು, ಅರ್ನಹರಿಗೆ ಅಜೀರ್ಣ

ರಾಜ್ಯದಲ್ಲಿರುವ ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಓಡಾಡಿ ಕಡೆಗೀಗ ಬಿಜೆಪಿಯಲ್ಲಿ ಸ್ಥಿರವಾಗಿರುವ ಯೋಗೇಶ್ವರ ಅವರು ಚನ್ನಪಟ್ಟಣದಲ್ಲಿ ಸೋತ ನಂತರ ಈಗ ಹುಣಸೂರಿನಿಮದ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ. ಈ ಬಗ್ಗೆ ಅವರಿಗೆ ಬಿಜೆಪಿ ಹೈಕಮಾಂಡಿನಿಮದ ಸುಳಿವು ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ.

ವಿಧಾನಸಭೆ ಪ್ರವೇಶಿಸುವ ತಮ್ಮ ಇಂಗಿತವನ್ನು ಬಹಿರಂಗವಾಗಿಯೇ ಹೇಳಿಕೊಂಡಿರುವ ಯೋಗೇಶ್ವರ್ ಹುಣಸೂರಿನಿಂದ ಸ್ಪರ್ಧಿಸಿದ್ದೇ ಆದಲ್ಲಿ ಅನರ್ಹ ಶಾಸಕ ವಿಶ್ವನಾಥ್ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳುಹಿಸಬೇಕಾದ ಜವಾಬ್ದಾರಿ ಬಿಜೆಪಿ ಹೆಗಲಿಗೆ ಬೀಳಲಿದೆ.

ಅಷ್ಟೇ ಅಲ್ಲದೇ ವಿಶ್ವನಾಥ್ ಅವರಿಗೆ ಮಂತ್ರಿಭಾಗ್ಯವನ್ನೂ ಕರುಣಿಸಲು ಹೈಕಮಾಂಡ್ ಒಪ್ಪಿದೆ ಎನ್ನಲಾಗಿದೆ. ಹುಣಸೂರಿನಿಮದ ಸ್ಪರ್ಧಿಸಿದರೆ ವಿಶ್ವನಾಥ್‌ಗೆ ಸೋಲು ಗ್ಯಾರಂಟಿ ಎಂಬ ಬೇಹು ವರದಿಗಳ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ಬಿಜೆಪಿ ಮುಂದಾಗಿದೆ.

ಈ ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್‌ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಅದಕ್ಕಾಗಿ ಯೋಗೇಶ್ವರ್‍ ಅವರ ಮೊರೆ ಹೋಗಿದೆ ಎನ್ನಲಾಗಿದೆ. ಯೇಗೇಶ್ವರ್‍ ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...