huchcha ನಿಲ್ಲದ ವೆಂಕಟನ ಹುಚ್ಚಾಟ, ಮಡಿಕೇರಿ ಆಯ್ತು ಈಗ ಪಿರಿಯಾಪಟ್ಟಣದಲ್ಲಿ ರಂಪ

huchcha ಪೆಟ್ರೋಲ್ ಬಂಕ್‌ನಲ್ಲಿ ಹುಚ್ಚನ ಕಿರಿಕ್: ಹೊಡೆತದಿಂದ ಬಚಾವ್

ಬೆಂಗಳೂರು: ಹುಚ್ಚ ವೆಂಕಟನ ರಂಪಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ( huchcha ) ಮಡಿಕೇರಿಯಲ್ಲಿ ಕಿರಿಕ್ ಮಾಡಿಕೊಂಡ ನಂತರ ಶುಕ್ರವಾರ ಬೆಳಗ್ಗೆ ಪಿರಿಯಾಪಟ್ಟಣ ಚೌಡೇನಹಳ್ಳಿ ಪೆಟ್ರೋಲ್ ಪಂಪ್ ನಲ್ಲಿ ಹುಚ್ಚ ವೆಂಕಟ್ ಹುಚ್ಚಾಟ ಮಾಡಿದ್ದಾನೆ.

ಇದನ್ನೂ ಓದಿ: ಕೆನರಾ ಬ್ಯಾಂಕ್ ಜೊತೆ ಸಿಂಡಿಕೇಟ್ ಬ್ಯಾಂಕ್ ವಿಲೀನ: ಕೇಂದ್ರದ ನಿರ್ಧಾರ

ಗುರುವಾರ ಮಡಿಕೇರಿಯಲ್ಲಿ ಸಾರ್ವಜನಿಕರೊಂದಿಗೆ ಕೆಟ್ಟದಾಗಿ ವರ್ತಿಸಿ ಸಾರ್ವಜನಿಕವಾಗಿ ಥಳಿಸಿಕೊಂಡ ನಂತರ ಈ ಹುಚ್ಚ ವೆಂಕಟ ಶುಕ್ರವಾರ ಬೆಳಗ್ಗೆ ಪರಿಯಾಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ತನ್ನ ಕಿರಿಕ್ ವರ್ತನೆಯಿಂದ ಹೊಡೆತ ತಿನ್ನುವುದನ್ನು ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾನೆ.

ಬಿಗ್ ಬಾಸ್‌ನಲ್ಲಿ ಹುಚ್ಚಾಟದಿಂದ ಅಪಖ್ಯಾತಿ ಗಿಟ್ಟಿಸಿದ ಹುಚ್ಚ ವೆಂಕಟ ಇತ್ತೀಚೆಗೆ ತನ್ನ ಅತಿರೇಕದ ವರ್ತನೆಯಿಂದ ಸಾರ್ವಜನಿಕರ ಕಣ್ಣಲ್ಲಿ ವಿಲನ್ ಆಗಿ ಪರಿವರ್ತನೆಗೊಂಡಿದ್ದಾನೆ. ಚೆನ್ನೈನ ಬೀದಿಗಳಲ್ಲಿ ಭಿಕಾರಿಯಂತೆ ತಿರುಗಾಡುತ್ತಿದ್ದ ಈ ವೆಂಕಟ ನಂತರ ಮಂಡ್ಯ ಹಾಗೂ ಮಡಿಕೇರಿಯಲ್ಲಿ ಕಾಣಿಸಿಕೊಂಡಿದ್ದ.

ಗುರುವಾರ ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪ ಈ ಘಟನೆ ನಡೆದಿದ್ದು ನಾಪೋಕ್ಲು ನಿವಾಸಿ ದಿಲೀಪ್ ಹುಚ್ಚ ವೆಂಕಟ್‌ನಿಂದ ಹಲ್ಲೆಗೊಳಗಾಗಿದ್ದ. ಬಳಿಕ ವೆಂಕಟನ ಹುಚ್ಚಾಟ ಸಹಿಸಿಕೊಳ್ಳಲಾಗದೇ ಅಲ್ಲಿ ನೆರದಿದ್ದವರೇ ಮನಸೋಯಿಚ್ಛೆ ಥಳಿಸಿ ದಂಡಿಸಿದ್ದರು.

ಡಿಪೋ ಸಮೀಪದ ಹೋಟೆಲ್ ಕೂರ್ಗ್ ಮ್ಯಾಂಡ್ರಿಲ್ ಬಳಿ ಕಾರನ್ನು ನಿಲ್ಲಿಸಿದ್ದ ದಿಲೀಪ್, ಹುಚ್ಚಾ ವೆಂಕಟ್ ಇರಬಹುದು ಎಂದು ಆಶ್ಚರ್ಯದಿಂದ ದಿಟ್ಟಿಸಿ ನೋಡಿದ್ದಾರೆ ಅದಕ್ಕೆ ಏನ್ ಹಾಗೆ ನೋಡ್ತಿದಿಯಾ ಎಂದು ವೆಂಕಟ್ ದಿಲೀಪ್ ಎನ್ನುವವರಿಗೆ ಕಪಾಳಮೋಕ್ಷ ಮಾಡಿದ್ದ.

ಅಷ್ಟಲ್ಲದೆ ಹೊಟೇಲ್ ಮುಂದೆ ನಿಲ್ಲಿಸಿದ್ದ ದಿಲೀಪ್ ಅವರ ಮಾರುತಿ 800 ಕಾರಿನ ಮೇಲೆ ಕಲ್ಲೆಸೆದು ಪುಡಿಮಾಡಿ ಇದರ ಬೆಲೆ ಎಷ್ಟಾಗುತ್ತೆ ಹೇಳೋ..?. ನೀನೇನು ರೌಡಿನಾ..? ಯಾರನ್ನ ಕರೆಸುತ್ತೀಯಾ ಕರೆಸು.. ಎಂದೆಲ್ಲಾ ಆವಾಜ್ ಹಾಕಿದ್ದ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...