hotel nalapaka ಸಂಕ್ರಾಂತಿ ಸವಿ ಭೋಜನಕ್ಕೆ ಬನ್ನಿ ನಳಪಾಕ ಹೋಟೆಲಿಗೆ

hotel nalapaka

hotel nalapaka ಸುಗ್ಗಿಯ ಸವಿ ಉಣಬಡಿಸಲು ಸಿದ್ಧವಾದ ಹೋಟೆಲ್ ನಳಪಾಕ

ಬೆಂಗಳೂರು: ಬೆಂಗಳೂರಿನ ಹೆಮ್ಮೆಯ, ಉತ್ತರ ಕರ್ನಾಟಕ ( hotel nalapaka) ಶೈಲಿಯ ಊಟಕ್ಕೆ ಹೆಸರುವಾಸಿಯಾದ ಹೋಟೆಲ್ ನಳಪಾಕ ನಗರವಾಸಿಗಳಿಗೆ ಸಂಕ್ರಾಂತಿ ಹಬ್ಬದ ಸವಿಯೂಟ ಬಡಿಸಲು ಸಜ್ಜಾಗಿ ನಿಂತಿದೆ. ಎರಡು ದಶಕಗಳಿಂದ ಬೆಂಗಳೂರಿಗರ ನಾಲಗೆಯನ್ನು ರುಚಿಕಟ್ಟಾದ ಊಟದೊಂದಿಗೆ ಪೋಷಿಸಿರುವ ನಳಪಾಕ ಹೋಟೆಲ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಭೋಜನ ಅಭಿಯಾನ ಹಮ್ಮಿಕೊಂಡಿದೆ.

ಇದನ್ನೂ ಓದಿ: ಮಕರ ಸಂಕ್ರಾಂತಿ ಎಂಬ ಹೆಸರೇಕೆ ಬಂದಿದೆ?

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಮಂದಿ ಮಾತ್ರವಲ್ಲದೇ ಎಲೆಲ ಭೋಜನ ಪ್ರಿಯರ ಅಚ್ಚುಮೆಚ್ಚಿನ ತಾಣವಾಗಿರುವ ಹೋಟೆಲ್ ನಳಪಾಕದಲ್ಲಿ ಸೋಮವಾರದಿಂದ ಒಂದು ವಾರ ಕಾಲ ಸಂಕ್ರಾಂತಿ ಸ್ಪೆಶಲ್ ಭೋಜನದ ಸವಿ ಲಭ್ಯವಿರಲಿದೆ.

ಸೋಮವಾರದಿಂದ (ಜನವರಿ 6) ಜನವರಿ 15ರವರೆಗೆ ನಡೆಯಲಿರುವ ಈ ಭೋಜನ ಹಬ್ಬಕ್ಕೆ ಕಲಾವಿದರಾದ ಅಜಿತ್ ಜೈರಾಜ್ ಹಾಗೂ ಶುಭಾ ಪೂಂಜಾ ಸೋಮವಾರ ಬೆಳಗ್ಗೆ ಚಾಲನೆ ನೀಡಲಿದ್ದು, ಚಿತ್ರರಂಗದ ಅನೇಕ ಮಾನ್ವಿತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ರಾಜಾಜಿನಗರದಲ್ಲಿ ಎರಡು ದಶಕದ ಹಿಂದೆ ತಲೆ ಎತ್ತಿರುವ ಹೋಟೆಲ್ ನಳಪಾಕ ಅಂದಿನಿಂದ ಇಂದಿನವರೆಗೂ ಶುಚಿ, ರುಚಿ ಮತ್ತು ಗುಣಮಟ್ಟದ ಭೋಜನಕ್ಕೆ ಹೆಸರುವಾಸಿಯಾಗಿದ್ದು, ಉತ್ತರ ಕರ್ನಾಟಕ ಶೈಲಿಯ ಭೋಜನಾಸಕ್ತರ ಮೆಚ್ಚಿನ ಆಹಾರ ತಾಣವಾಗಿದೆ.

ಈ ಒಂದು ವಾರ ಕಾಲ ವಿವಿಧ ರುಚಿಯ ಉತ್ತರ ಕನಾಟಕದ ಜೋಳದ ರೊಟ್ಟಿ ಊಟದ ಜೊತೆಗೇ ಪ್ರತಿದಿನ ಸಂಕ್ರಾಂತಿ ಹಬ್ಬದ ಸಿಹಿ ಭಕ್ಷ್ಯಗಳ ವಿಶೇಷ ಭೋಜನ ಲಭ್ಯವಿರಲಿದೆ ಎಂದು ಹೋಟೆಲ್ ನಳಪಾಕ ವ್ಯವಸ್ಥಾಪಕರಾದ ಲಿಂಗಯ್ಯ ಕಾಡದೇವರಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...