ಚುಮು ಚುಮು cold weatherಗೆ ಜನ ತತ್ತರ

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರು ನಗರ ಸೇರಿದಂತೆ ಕೆಲವು ಭಾಗದಲ್ಲಿ ಇದ್ದಕ್ಕಿದ್ದ ಹಾಗೆ ಮುಂಜಾನೆ, ಸಂಜೆ ಮೈಕೊರೆಯುವ ಚಳಿ, ಮಧ್ಯಾಹ್ನವಾಗುತ್ತಿದ್ದಂತೆಯೇ ನೆತ್ತಿ ಸುಡುವ ಬಿಸಿಲು ವಾತಾವರಣವಾಗಿದೆ.

ಮುಂಜಾನೆಯಂತೂ ಎದೆಗೆ ಕಚಗುಳಿ ಇಡುವಷ್ಟು ಚುಮು ಚುಮು ಚಳಿ.  ರಾಜ್ಯದೆಲ್ಲೆಡೆ ಚಳಿಯ ಅಬ್ಬರ ಹೆಚ್ಚಾಗಿದ್ದು, ಮೈಕೊರೆಯುವ ಚಳಿಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.

ಇದನ್ನು ಓದಿ: ಶೀಘ್ರವೇ ತೆರೆಗೆ ಬರಲಿದೆ ‘ಯಜಮಾನ’

ಉತ್ತರ ಭಾರತದಿಂದ ದಕ್ಷಿಣದ ಕಡೆ ಬೀಸುತ್ತಿರುವ ಗಾಳಿಯಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಇನ್ನೂ ಒಂದು ವಾರದವರೆಗೆ ಈ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

2016ರ ನಂತರ ಇಷ್ಟು ಕಡಿಮೆ ಉಷ್ಣಾಂಶ ದಾಖಲಾಗಿರುವುದು ಈ ವರ್ಷದಲ್ಲೇ. ಜನವರಿ 10 ರವರೆಗೂ ಚಳಿಯ ತೀವ್ರತೆ ಹೀಗೆ ಮುಂದುವರೆಯಲಿದೆ.

cold season
cold weather ಚುಮು ಚುಮು ಚಳಿ

ಚಳಿಗಾಲದಲ್ಲಿ ನಾವು ಎಚ್ಚರದಿಂದ ಇಲ್ಲದೆ ಹೋದರೆ ಮೈಕೈ ಬಿರುಕು ಬಿಡುವುದು, ತ್ವಚೆ ಗಡಸಾಗುವುದು, ಇಬ್ಬನಿಯಲ್ಲಿ ಓಡಾಡುವುದರಿಂದ ಶೀತ, ನೆಗಡಿ, ಕೆಮ್ಮು ಹೀಗೆ ಕೆಲವೊಂದು ಆರೋಗ್ಯದ ಸಮಸ್ಯೆಗಳು ಕಾಣಿಸಬಹುದು. ಆದರೆ ಒಂದಷ್ಟು ಎಚ್ಚರಿಕೆಯ ಕ್ರಮಗಳನ್ನು ವಹಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಇಬ್ಬನಿಗೆ ನಡೆದಾಡುವವರು ಟೋಪಿ, ಮಪ್ಲರ್ ಬಳಸುವುದು, ಕಿವಿಗೆ ಹತ್ತಿಹಾಕಿಕೊಳ್ಳುವುದು, ಮೈತುಂಬಾ ಬಟ್ಟೆ ಹಾಕಿ ಶರೀರವನ್ನು ಬೆಚ್ಚಗಿಟ್ಟುಕೊಂಡರೆ ಶೀತವಾಗದಂತೆ ತಡೆಯಬಹುದು.

ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸುವುದು ಸಾಮಾನ್ಯವಾಗಿದ್ದು, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಬಿಸಿಲಿಗೆ ಹೋಗುವಾಗ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು.

ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು.

ಇದನ್ನು ಓದಿ: ಸಾಲಮನ್ನಾ: ಮೋದಿಗೆ ದೇವೇಗೌಡ ತರಾಟೆ

ಇನ್ನು ಬೆಳಿಗ್ಗೆ ಮತ್ತು ರಾತ್ರಿ ಕೆಲಸಕ್ಕೆ ಹೋಗುವವರು ಚಳಿಯ ಹೊಡೆತಕ್ಕೆ ಹೈರಾಣಾಗಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಚಳಿ ಜಾಸ್ತಿ ಇದೆ ಎನ್ನಲಾಗುತ್ತಿದೆ. ಚಳಿಯಿಂದಾಗಿ ವಾಕಿಂಗ್ ಹೋಗುವವರು ಮನೆಯಿಂದ ಹೊರಗೆ ಬರುತ್ತಿಲ್ಲ. ಬೆಳಗಿನ ವೇಳೆ ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಅದರ ಸುತ್ತ ಕುಳಿತು ಮೈ ಕಾಯಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಬಸ್‍ನಲ್ಲಿ ಪ್ರಯಾಣ ಮಾಡುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದು ಒಳ್ಳೆಯದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...