honeytrap ಹನಿಟ್ರಾಪ್: ಬೆಡ್‌ರೂಮಿಗೆ ಬಿಟ್ಟುಕೊಳ್ಳದೇ ಬಚಾವಾದರು ಶಾಸಕರು

honeytrap

honeytrap ಲಲನೆಯರ ’ಮಧುಬಲೆ’ಗೆ ಬಿದ್ದಿದ್ದು ಒಬ್ಬರಲ್ಲ 5 ಶಾಸಕರು!

ಬೆಂಗಳೂರು: ಕರ್ನಾಟಕವನ್ನು ಬೆಚ್ಚಿಬೀಳಿಸಿರುವ ಹನಿಟ್ರಾಪ್‌ ( honeytrap ) ಪ್ರಕರಣದಲ್ಲಿ ಕೇವಲ ಒಬ್ಬರಲ್ಲ ಐವರು ಶಾಸಕರು ಸಿಲುಕಿರಬಹುದು ಎಂಬ ಸಂಶಯ ಸುಳಿದಾಡುತ್ತಿದೆ. ಲಲನೆಯರು ಮತ್ತು ಕಿಡಿಗೇಡಿಗಳು ಹೆಣೆದ ಈ ಮಧುಬಲೆಯಲ್ಲಿ ನೇರವಾಗಿ ಸಿಕ್ಕಿ ಹಾಕಿಕೊಳ್ಳುವುದರಿಂದ ಐವರು ಶಾಸಕರು ಬಚಾವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಚುನಾವಣಾ ಪ್ರಚಾರ: ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ಭಾರೀ ಡಿಮಾಂಡ್

ಲಲನೆಯರ ಸಂಗವನ್ನು ಕೇವಲ ಟೆಲಿಫೋನ್ ಸಂಭಾಷಣೆಗಷ್ಟೇ ಸೀಮಿತಗೊಳಿಸಿಕೊಂಡು ಅವರನ್ನು ಬೆಡ್‌ರೂಮಿಗೆ ಬಿಟ್ಟುಕೊಳ್ಳದೇ ಎಚ್ಚರ ವಹಿಸುವ ಮೂಲಕ ಮಧುಬಲೆಯ ಪಾಪಕೂಪದಿಂದ ಐವರು ಶಾಸಕರು ಪಾರಾಗಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟಿಯರನ್ನು ಬಳಸಿಕೊಂಡು ರಾಜಕಾರಣಿಗಳು ಸೇರಿ ಸುಮಾರು 20 ಮಂದಿ ಗಣ್ಯರಿಗೆ ಕುತಂತ್ರಿ ಗ್ಯಾಂಗ್ ಬಲೆ ಬೀಸಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಇವರಲ್ಲಿ ಹತ್ತು ಮಂದಿ ರಾಜಕಾರಣಿಗಳಿದ್ದರು ಎನ್ನಲಾಗುತ್ತಿದೆ.

ಈ ಸಂಬಂಧ ಯಾವುದೇ ರೀತಿಯ ದೂರು ನೀಡಲು ಟ್ರಾಪ್‌ಗೆ ಒಳಗಾದವರು ಮುಂದಾಗುತ್ತಿಲ್ಲವಾದ್ದರಿಮದ ತನಿಖೆಯ ವ್ಯಾಪ್ತಿ ಕಿರಿದಾಗಿದೆ. ಬಂದಿರುವ ಒಂದು ದೂರಿನ ಬೆನ್ನೇರಿ ಪೊಲೀಸರು ತಪ್ಪಿತಸ್ದರಿಗೆ ವ್ಯಾಪಕ ಬಲೆ ಬೀಸಿದ್ದಾರೆ.

ಈ ಮಧ್ಯೆ ಪ್ರಮುಖ ಆರೋಪಿ ರಾಘವೇಂದ್ರನಿಂದ ವಶ ಪಡಿಸಿಕೊಳ್ಳಲಾಗಿರುವ ಹಾರ್ಡ್‌ ದ್ರೈವ್, ಪೆನ್‌ ಡ್ರೈವ್‌ಗಳಲ್ಲಿ ತಮ್ಮ ಸಂಭಾಷಣೆಗಳ ತುಣುಕು ಇರುವ ಬಗ್ಗೆ ಆತಂಕಗೊಂಡಿರುವ ಕೆಲವರು ಹಾಗಿದ್ದಲ್ಲಿ ಅದು ಹೊರಬರದಂತೆ ನೋಡಿಕೊಳ್ಳಿ ಎಂದು ಪೊಲೀಸರ ದುಂಬಾಲು ಬಿದ್ದಿದಾರೆನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...