hindu protest ಏಸು ಪ್ರತಿಮೆಗೆ ವಿರೋಧ: ಕನಕಪುರದಲ್ಲಿ 1000 ಪೊಲೀಸರ ಸರ್ಪಗಾವಲು

hindu protest

hindu protest ಹಿಂದು ಜಾಗರಣ ವೇದಿಕೆಯಿಂದ ಸೋಮವಾರ ಕನಕಪುರ ಚಲೋ ಜಾಥಾ

ಬೆಂಗಳೂರು: ಪಕಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣವನ್ನು ( hindu protest ) ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು ಸೋಮವಾರ ಕನಕಪುರ ಚಲೋ ಜಾಥಾ ಹಮ್ಮಿಕೊಂಡಿದ್ದು ಇಡೀ ತಾಲೂಕಿನಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಇದನ್ನೂ ಓದಿ: ಏಸು ಪ್ರತಿಮೆ: ಡಿಕೆಶಿ ವಿರುದ್ಧ ತೊಡೆ ತಟ್ಟಿದ ಯೋಗೇಶ್ವರ್

ಉದ್ದೇಶಿತ ಜಾಥಾದಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸುಮಾರು ಒಂದು ಸಾವಿರ ಪೊಲೀಸರನ್ನು ಶಾಂತಿ ಕಾಪಾಡಲು ನಿಯೋಜಿಸಲಾಗಿದೆ ಎಂದು ಪೊಲೀಸ್ ಉನ್ನತಾಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ ಜಾಥಾ ಸಂದರ್ಭಲದಲ್‌ಇ ಯಾವುದೇ ಪ್ರಚೋದನಕಾರಿ ಹೇಳಿಕೆಗಳಿಗೆ ಅಥವ ಶಾಂತಿ ಕದಡುವ ಪ್ರಚೋದನೆಗಳಿಗೆ ಒಳಗಾಗದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್‍ ಕನಕಪುರದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಪಾಲ ಬೆಟ್ಟದಲ್ಲಿ 115 ಅಡಿ ಎತ್ತರದ ಏಸು ಪ್ರತಿಮೆ ಸ್ಥಾನಪನೆಯ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್‍ ಹೇಳಿಕೆ ನೀಡಿದ ಬೆನ್ನಲ್ಲಿಯೇ ಬಿಜೆಪಿ ಮತ್ತು ಇತರ ಹಿಂದೂಪರ ಸಂಘಟನೆಗಳಿಂದ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಸುಮಾರು 5000 ಹೆಚ್ಚು ಜನರು ಕನಕಪುರ ಚಲೋದಲ್ಲಿ ಭಾಗವಹಿಸಲಿದ್ದು, ಪ್ರತಿಭಟನಾ ಮೆರವಣಿಗೆ ಪಟ್ಟಣದ ಅಯ್ಯಪ್ಪ ದೇವಸ್ಥಾನ ದಿಂದ ಹೊರಟು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹಿಂದು ಜಾಗರಣಾ ವೇದಿಕೆಯ ಸುರೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...