high court ಟಿಪು ಜಯಂತಿ ರದ್ದು ಮರುಪರಿಶೀಲಿಸಿ: ಬಿಎಸ್ವೈ ಸರಕಾರಕ್ಕೆ ಹೈ ಆದೇಶ

high court
tipu tableau

high court ಖಾಸಗಿಯಾಗಿ ಜಯಂತಿ ಆಚರಣೆಗೆ ತಡೆ ಬೇಡೆಂದ ಹೈಕೋರ್ಟ್‌

ಬೆಂಗಳೂರು: ಸೂಕ್ತ ಪರಾಮರ್ಶೆ ನಡೆಸದೇ ( high court ) ಟಿಪು ಜಯಂತಿ ಆಚರಣೆಯನ್ನು ರದ್ದು ಮಾಡಲಾಗಿದ್ದು, ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ಬಿಎಸ್ವೈ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಇದೂ ಒಂದಾಗಿತ್ತು.

ಇದನ್ನೂ ಓದಿ: ಟಿಪು ಪರ ಬ್ಯಾಟ್ ಬೀಸಿದ ನ್ಯಾ. ಸಂತೋಷ್ ಹೆಗ್ಡೆ

ಟಿಪು ಜಯಂತಿ ರದ್ದು ಮಾಡಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆ ಓಕಾ ಅವರಿದ್ದ ಪೀಠ ಜಯಂತಿ ರದ್ದು ಮಾಡಲು ಸರಕಾರ ಯಾವುದೇ ಸೂಕ್ತ ಪರಿಶಿಲನೆ ನಡೆಸಿದಂತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತು.

ತನ್ನ ನಿರ್ಧಾರ ಮರುಪರಿಶೀಲಿಸಲು ರಾಜ್ಯ ಸರಕಾರಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿದ ನ್ಯಾಯಪೀಠ ಖಾಸಗಿಯಾಗಿ ಟಿಪು ಜಯಂತಿ ಆಚರಣೆಗೆ ಅಡ್ಡಿ ಬೇಡ ಎಂದು ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿ ಮಾಡಲಾಗಿದೆ,

ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪು ಜಯಂತಿಯನ್ನು ಸರಕಾರಿ ಕಾರ್‍ಯಕ್ರಮವಾಗಿ ಆಚರಿಸುವ ನಿರ್ಧಾರ ಕೈಗೊಮಡಿತ್ತು. ಇಂತಹ ನಿರ್ಧಾರ ಕೈಗೊಳ್ಳಲು ಏನು ಕಾರಣ ಎಂದು ಅಂದಿನ ಸರಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...