ದಿನ ಭವಿಷ್ಯ

ಬುಧವಾರ, 05.12.2018

ಶ್ರೀ ವಿಲಂಬಿನಾಮ ಸಂವತ್ಸರ

  • ಸೂರ್ಯೋದಯ ಇಂದು: 6-19
  • ಸೂರ್ಯಾಸ್ತ ಇಂದು: 6-09
  • ರಾಹುಕಾಲ: 12-00 ರಿಂದ 1-30
  • ಗುಳಿಕಕಾಲ: 10-30 ರಿಂದ 12-00
  • ಯಮಗಂಡಕಾಲ: 7-30 ರಿಂದ 9-00
  • ಅದೃಷ್ಟ ಸಂಖ್ಯೆ: 6-5-5-1
  • ಶುಭಯೋಗ: 9-11 ರಿಂದ 10-26

ಮೇಷ

ಅವಸರದ ನಿರ್ಧಾರಗಳಿಂದ ನಷ್ಟ ಅನುಭವಿಸಬೇಕಾಗುವುದು. ಮನೆ ಮಂದಿಯ ಸಹಕಾರ ಪಡೆಯಿರಿ. ಅವರು ನಿಮ್ಮ ಆಶೋತ್ತರಗಳನ್ನು ಈಡೇರಿಸಲು ಸಹಕಾರ ನೀಡುವರು. ಬಂಧುಗಳ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂತಸ ನೆಲೆಸುವುದು.

ವೃಷಭ

ಮನಸ್ಸಿನ ಚಂಚಲತೆಯಿಂದ ಹೊರ ಬನ್ನಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮನಸ್ಸು ಸರಿಯಿರದ ದಿನದಲ್ಲಿ ಯಾವುದೇ ಮಹತ್ತರ ನಿರ್ಣಯ ತೆಗೆದುಕೊಳ್ಳದಿರಿ. ನಿಮ್ಮ ಮನೆಗೆ ಸಮಾಜ ಮುಖಂಡರು ಇಲ್ಲವೆ ರಾಜಕೀಯ ಧುರೀಣರು ಭೇಟಿ ನೀಡುವರು.

ಮಿಥುನ

ಈಗ ಆಗಿರುವ ನಷ್ಟ ಸರಿದೂಗಿಸುವಷ್ಟು ಹಣಕಾಸಿನ ನೆರವು ದೊರೆಯುವುದು. ಗುರು ನಿಮಗೆ ಸಮಾಜದಲ್ಲಿ ಗೌರವ, ಆದರಗಳನ್ನು ಕೊಡಿಸುವನು. ಮಕ್ಕಳ ಕಲರವ ಮನಸ್ಸಿಗೆ ಮುದ ನೀಡುವುದು. ಮಕ್ಕಳು ಇಲ್ಲವೆ ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವಿರಿ.

ಕಟಕ

ಸ್ಥಿರಾಸ್ತಿ ಖರೀದಿಸಲು ನಿಮ್ಮ ಮನೆಯಲ್ಲಿ ಮಾತುಕತೆ ನಡೆಯುವ ಸಂಭವವಿರುತ್ತದೆ. ಕೆಲವರು ನೂತನ ವಾಹನ ಖರೀದಿ ಬಗ್ಗೆ ಯೋಚಿಸುವರು. ಹಿರಿಯರ ಆಶೀರ್ವಾದಗಳಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಸಿಂಹ

ಸಮಾಧಾನದಿಂದ ಇದ್ದರೆ ಮಾತ್ರ ನೆರೆಹೊರೆಯವರೊಡನೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವಿರಿ. ಮಹತ್ವದ ತೀರ್ಮಾನ ಕೈಗೊಳ್ಳಬೇಡಿ. ನವ ದಂಪತಿಗೆ ಸಂತತಿ ವಿಚಾರವಾಗಿ ವಾದ, ವಿವಾದ ಉಂಟಾಗುವ ಸಾಧ್ಯತೆ ಇದೆ.

ಕನ್ಯಾ

ಬಹುದಿನದ ಆಸೆ ಈಡೇರಿದ ಸಂತೃಪ್ತಿ ನಿಮ್ಮದಾಗುವುದು. ಖಾಸಗಿ ನೌಕರರಿಗೆ ಉದ್ಯೋಗದಲ್ಲಿನ ಏಕತಾನತೆಯಿಂದ ಬೇಸರ ಮೂಡುವುದು. ಮುಂದಿನ ದಿನಗಳಲ್ಲಿ ಈ ಕೆಲಸ ಬಿಟ್ಟು ಬಿಡಲೇ ಎಂದು ಚಿಂತಿಸುವರು. ಯಾವುದಕ್ಕೂ ಹಿರಿಯರ ಸಲಹೆ ಅನುಸರಿಸಿ.

ತುಲಾ

ಚಿಕ್ಕ ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯ ಬೇಕುಬೇಡಗಳ ಕಡೆ ಲಕ್ಷ್ಯವಿರಲಿ. ವ್ಯಾಪಾರ, ವ್ಯವಹಾರದಲ್ಲಿ ನಿಮ್ಮ ಜಾಣತನವೇ ನಿಮಗೆ ಲಾಭ ತರುವುದು. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ವೃಶ್ಚಿಕ

ಸಾಲಗಳು ತಕ್ಕಮಟ್ಟಿಗೆ ತೀರಲಿವೆ. ವ್ಯಾಪಾರ, ವ್ಯವಹಾರದಲ್ಲಿ ಸ್ನೇಹಿತರಿಂದ ಬೆಂಬಲ ಮತ್ತು ಸಹಕಾರ ದೊರೆಯುವುದು. ಪ್ರೇಮಿಗಳಲ್ಲಿ ಅನಿರೀಕ್ಷಿತ ಭಿನ್ನಾಭಿಪ್ರಾಯ ಕಂಡು ಬರುವುದು. ಅಜೀರ್ಣ ಸಂಬಂಧಿ ವ್ಯಾಧಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮಾಡಿಸಿ.

ಧನಸ್ಸು

ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮ್ಮ ಯಶಸ್ಸಿಗೆ ಕಾರಣವಾಗುವುದು. ಹಣಕಾಸು ವ್ಯವಹಾರದಲ್ಲಿ ಕಟ್ಟುನಿಟ್ಟಾಗಿರಿ. ರಜೆಯನ್ನು ಸಂತೋಷದಿಂದ ಕಳೆಯುವಿರಿ. ಯಾವುದೇ ಆತಂಕಗಳು ಎದುರಾಗುವುದಿಲ್ಲ.

ಮಕರ

ಮನೆಯ ಹಿರಿಯರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಅನಾರೋಗ್ಯ ಸುಧಾರಿಸಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.

ಕುಂಭ

ಗುರಿ ಸಾಧನೆಗೆ ಏಕಾಗ್ರತೆ ಪ್ರಮುಖವಾಗುವುದು. ಈಗಾಗಲೇ ಬರೆದಿರುವ ಪರೀಕ್ಷೆಯ ಫಲಿತಾಂಶ ನಿಮ್ಮ ಪ್ರಗತಿಗೆ ಕಾರಣವಾಗುವುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ.

ಮೀನ

ಮಾನಸಿಕ ಒತ್ತಡದಿಂದ ದೈಹಿಕ ಆರೋಗ್ಯ ವ್ಯತ್ಯಯವಾಗುವುದು. ರಜೆಯನ್ನು ಸ್ನೇಹಿತರೊಂದಿಗೆ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದರಿಂದ ನವ ಚೈತನ್ಯ ಹೊಂದುವಿರಿ. ಸಂಜೆ ಯಾವುದಾದರೂ ದೇವಾಲಯಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...