hegde reveals ಮಹಾರಾಷ್ಟ್ರ ರಾಜಕಾರಣದಲ್ಲಿ ಕಿಚ್ಚು ಹಚ್ಚಿದ ಅನಂತ್ ಹೆಗಡೆ ಮಾತು

hegde reveals
anant hegde and devendra fadnavis

hegde reveals 40 ಸಾವಿರ ಕೋಟಿ ಅನುದಾನ ವಾಪಸಿಗೆ ಫಡ್ನವಿಸ್ ಸರಕಾರ ಮಾಡಿದ್ರು ಎಂದ ಅನಂತ್

ಹೊಸದಿಲ್ಲಿ: ಕೇಂದ್ರದ ಅನುದಾಣದ ಹಣ ಶಿವಸೇನೆ ಮೈತ್ರಿಕೂಟದ ಕೈ ( hegde reveals ) ಸೇರಬಾರದು ಎಂಬ ಒಂದೇ ಉದ್ದೇಶಕ್ಕಾಗಿ ಬಹುಮತ ಇಲ್ಲ ಎಂದು ತಿಳಿದೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಮಹಾ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ.

ಇದನ್ನೂ ಓದಿ: ಅನರ್ಹರಿಗೆ ಬಿಜೆಪಿ ಕಾರ್‍ಯಕರ್ತರ ಒಳೇಟಿನದ್ದೇ ಚಿಂತೆ

ಮುಖ್ಯಮಂತ್ರಿಯಾಗಿ ಕೇವಲ 15 ಗಂಟೆಗಳಲ್ಲಿ ಫಡ್ನವಿಸ್ ಅವರು ಸಿಎಂ ಸುಪರ್ದಿಗೆ ಬರುವ 40 ಸಾವಿರ ಕೋಟಿ ರೂಗಳ ಅನುದಾನ ಹಣವನ್ನು ಕೇಂದ್ರ ಸರಕಾರಕ್ಕೆ ವಾಪಸ್ ಮಾಡಿ ಅದು ವಿರೋಧಿಗಳ ಕೈಸೇರದಂತೆ ನೋಡಿಕೊಂಡರು ಎಂದು ಹೆಗಡೆ ಹೇಳಿದ್ದರು.

ಅಜಿತ್ ಪವಾರ್‍ ಮಾತು ಕೇಳಿ ಮೊದಲ ಬಾಲ ಸುಟ್ಟ ಬೆಕ್ಕಿನಂತಾಗಿರುವ ದೇವೇಂದ್ರ ಫಡ್ನವಿಸ್ ತಮ್ಮ ಪಕ್ಷದವರೇ ಆದ ಹೆಗಡೆ ಅವರ ಈ ಹೇಳಿಕೆಯಿಂದ ಕೆಂಡಾಮಂಡಲರಾಗಿದ್ದು, ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ. ಹೆಗಡೆ ಹೇಳಿದಂತೇ ಏನೂ ಆಗಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಆದರೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಮುಖಂಡರಿಗೆ ಹೆಗಡೆ ಅವರ ಹೇಳಿಕೆ ಬಿಜೆಪಿ ವಿರುದ್ಧ ಹರಿಹಾಯಲು ಪ್ರಬಲ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಮುಂಬರುವ ವಿಧಾಣಸಭಾ ಅಧಿವೇಶನದಲ್ಲಿ ಇದನ್ನೇ ದೊಡ್ಡ ವಿಚಾರವನ್ನಾಗಿಸಿ ಬಿಜೆಪಿಗೆ ಮುಜುಗರ ತರಲು ಅವರು ಹೊಂಚು ಹಾಕಿದ್ದಾರೆ.

ತಮ್ಮ ಸಡಿಲ ನಾಲಗೆಯಿಂದಾಗಿ ಅನಂತ್ ಕುಮಾರ್‍ ಹೆಗಡೆ ವಿವಾದದ ನೆಚ್ಚಿನ ಕೂಸಾಗಿ ಪರಿಣಮಿಸಿರುವುದು ಇದೇ ಮೊದಲ ಬಾರಿಯೇನಲ್ಲ. ಮೋದಿ ಸರಕಾರದ ಮೊದಲ ಅವಧಿಯಲ್ಲಿ ಮಂತ್ರಿಯಾಗಿದ್ದ ಹೆಗಡೆ ಅವರನ್ನು ಎರಡನೇ ಬಾರಿಗೆ ಮಂತ್ರಿ ಮಾಡದಿರಲು ಅವರು ವಿವಾದಿತ ಹೇಳಿಕೆಗಳೇ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...