hdk demands ನೆರೆ ಸ್ಥಿತಿ: ಪ್ರತಿಪಕ್ಷ ಸಭೆ ಕರೆಯಿರಿ: ಬಿಎಸ್ವೈಗೆ ಎಚ್ಡಿಕೆ ಆಗ್ರಹ

hdk demands
cm kumaraswamy

hdk demands ಪೂರ್ಣ ಪ್ರಮಾಣದ ಸಂಪುಟ ಇಲ್ಲದಿರುವುದು ಪರಿಹಾರಕ್ಕೆ ತೊಡಕು: ಎಚ್ಡಿಕೆ

ಹಾಸನ: ರಾಜ್ಯದಲ್ಲಿ ತಲೆದೋರಿರಿವ ಅಭೂತಪೂರ್ವ ನೆರೆ ಪರಿಸ್ಥಿತಿ ಮತ್ತು ಪರಿಹಾರ ( hdk demands ) ಕಾಮಗಾರಿಗಳ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳ ಸಭೆ ಕರೆಯುವಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಶಾ, ನಿರ್ಮಲಾ ಬಂದ್ರು ಹೋದ್ರು, ಪರಿಹಾರದ ಹಣ ಮಾತ್ರ ಬರಲಿಲ್ಲ

ಸಚಿವ ಸಂಪುಟ ರಚನೆಯಾಗದೇ ಅಧಿಕಾರಿಗಳು ಶಾಸಕರ ಮಾತು ಕೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗ ಆಗಿರುವ ನಷ್ಟವನ್ನ ಅಂದಾಜು ಮಾಡಲು ಒಂದು ತಿಂಗಳಿಗೂ ಹೆಚ್ಚು ಕಾಲವಾಗಬಹುದು,

ಪೂರ್ಣ ಪ್ರಮಾಣದ ಸಚಿವ ಸಂಪುಟ ಇಲ್ಲದಿರುವುದರಿಂದ ಪರಿಹಾರ ಕಾರ್‍ಯಗಳಿಗೆ ತೊಡಕುಂಟಾಗಿದೆ. ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. 16 ರಂದು ಸಂಪುಟ ವಿಸ್ತರಣೆ ಅಂತಾರೆ,

ಆದರೆ ಯಾವಾಗ ಮಾಡ್ತಾರೋ ಗೊತ್ತಿಲ್ಲ. ಈ ಕಾರಣ ಕೂಡಲೇ ಪ್ರತಿಪಕ್ಷಗಳ ಮುಖಂಡರ ಸಭೆ ಕರೆಯಿರಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಇನ್ನೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಎನ್ ಡಿಆರ್ ಎಫ್ ಗೈಡ್ ಲೈನಗ ಪ್ರಕಾರವಾದ್ರೂ ಪರಿಹಾರ ನೀಡಬೇಕಿತ್ತು. ಸಿಎಂ
ಯಡಿಯೂರಪ್ಪಗೆ ದೆಹಲಿಯಲ್ಲಿ ಎಷ್ಟರಮಟ್ಟಿಗೆ ಮರ್ಯಾದೆ ಕೊಡ್ತಾರೋ ಗೊತ್ತಿಲ್ಲ ಎಂದು ಎಚ್ಡಿಕೆ ಹೇಳಿದರು.

ರಾಜ್ಯದಲ್ಲಿ 4 ರಿಂದ 5 ಲಕ್ಷ ಕುಟುಂಬಗಳು ಬೀದಿಗೆ ಬಂದಿವೆ. ಸಮೀಕ್ಷೆಗೆಂದು ಬಂದ ಗೃಹಸಚಿವರು ಕೇಂದ್ರದ ನಿಲುವು ಪ್ರಕಟ ಮಾಡಬೇಕಿತ್ತು. ಸಿಎಂ ಮವನಿಗೆ ಯಾವುದೇ ಪ್ರತಿಕ್ರಿಯೆ ಅಥವಾ ಭರವಸೆ ನೀಡದೇ ವಾಪಸ್ ಹೋಗಿದ್ದಾರೆ. ಕೇಂದ್ರ ಸರ್ಕಾರ ಭರವಸೆ ನೀಡಿದ್ರೆ ಜನ್ರಿಗೆ ಒಂದು ಸಾಂತ್ವನ ಸಿಗುತ್ತಿತ್ತು.

ಕೇಂದ್ರದಿಂದ ತಕ್ಷಣಕ್ಕೆ 4 ರಿಂದ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು ಎಂದ ಎಚ್ಡಿಕೆ ರೈತರ ಸಾಲಮನ್ನಾ ಅಡಿಯಲ್ಲಿನ ಹಣವನ್ನ ಪ್ರಕೃತಿ ವಿಕೋಪಕ್ಕೆ ವರ್ಗಾವಣೆ ಮಾಡುವಂತೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...