hdk accuses ಬಿಎಸ್ವೈ ಸರಕಾರದ ಲಂಚಾವತಾರ ಬಿಚ್ಚಿಟ್ಟ ಕುಮಾರಸ್ವಾಮಿ

hdk accuses
cm bsy and hd kumaraswamy

hdk accuses ಜನರ ಕೆಲಸ ಮಾಡಲು ಲಂಚ ಕೇಳಿದ ಸಚಿವ: ಎಚ್ಡಿಕೆ ಬಾಂಬ್

ಮಂಡ್ಯ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗದೇ ( hdk accuses ) ಒದ್ದಾಡುತ್ತಿರುವ ಯಡಿಯೂರಪ್ಪ ಸರಕಾರ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಂದು ಬಾಂಬ್ ಎಸೆದಿದ್ದಾರೆ.

ಇದನ್ನೂ ಓದಿ: ನೆರೆ ಪರಿಹಾರ ಕೇಳಿದ್ದಕ್ಕೆ ಶಾಸಕ ಯತ್ನಾಳ್‌ಗೆ ಬಿಜೆಪಿ ನೋಟೀಸ್

ಯಡಿಯೂರಪ್ಪ ಸರಕಾರದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹೊಸದೊಂದು ಆರೋಪ ಮಾಡಿದ್ದಾರೆ.

ಜನಪರ ಕೆಲಸ ಮಾಡಿಕೊಡಲು ಈ ಸರಕಾರದ ಮಂತ್ರಿಯೊಬ್ಬರು 50 ಲಕ್ಷ ರೂ ಲಂಚ ಕೇಳಿದ್ದರು. ಕೊನೆಗೆ ಚೌಕಾಸಿ ನಂತರ 25 ಲಕ್ಷಕ್ಕೆ ತಮ್ಮ ಬೇಡಿಕೆ ಇಳಿಸಿದರು ಎಂದು ಸಚಿವರ ಹೆಸರು ಹೇಳದೇ ಕುಮಾರಸ್ವಾಮಿ ಆಪಾದಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಈ ವಿಷಯ ತಮ್ಮ ಗಮನಕ್ಕೆ ಬಂದಾಗ ಒಂದೆರಡು ತಿಂಗಳಲ್ಲಿ ಸರಕಾರವೇ ಬಿದ್ದುಹೋಗುತ್ತದೆ. ಈಗ ಸುಮ್ಮನಿರು ಎಮದು ಬುದ್ಧಿವಾದ ಹೇಳಿದೆ ಎಂದರು.

ಯಡಿಯೂರಪ್ಪ ಅವರ ಸರಕಾರಕ ಕಾರ್‍ಯವೈಖರಿಯನ್ನು ಮನೆಯಲ್ಲಿಯೇ ಕುಳಿತು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದು ಅವರು ತಿಳಿಸಿದರು.

ನಾನು ಅಧಿಕಾರ ಬಿಟ್ಟು ಹೊರ ಬಂದಾಗ 28 ಸಾವಿರ ಕೋಟಿ ಹಣ ಇತ್ತು. ಆ ಹಣ ಏನಾಗಿದೆ ಅಂತ ಯಡಿಯೂರಪ್ಪ ಹೇಳಬೇಕು. ಕರ್ನಾಟಕ ರಾಜ್ಯದ ಖಜಾನೆಗೆ ಯಾವತ್ತು ದರಿದ್ರ ಬಂದಿಲ್ಲ. ಹಣ ಇದೆ ಖರ್ಚು ಮಾಡೋ ಹೃದಯ ವೈಶಾಲ್ಯತೆ ಯಡಿಯೂರಪ್ಪ ಗೆ ಇಲ್ಲ ಎಂದು ದೂರಿದರು.

ನಾನು ಸಿಎಂ ಆಗಿದ್ದಾಗ ಸ್ವತಃ ಮೋದಿ ಅವ್ರೇ ನನಗೆ ಕರೆ ಮಾಡಿ ನೆರೆ ಬಗ್ಗೆ ಮಾಹಿತಿ ಪಡೆದ್ರು. ಯಾವ ಸಮಯದಲ್ಲಿ ಬೇಕಾದ್ರೂ ಕಾಲ್ ಮಾಡಿ ಅಂದ್ರು. ಆದ್ರೆ ಅವರ ಪಕ್ಷದ ಸಿಎಂ ಗೇಕೆ ಇಂಟರ್ ವ್ಯೂ ಕೊಡ್ತಿಲ್ಲ. ವಿಶ್ವಾಸದ ಕೊರತೆ, ಯಡಿಯೂರಪ್ಪ ನಡವಳಿಕೆಯನ್ನು ಮೋದಿ ನೋಡ್ತಿದ್ದಾರೆ. ಅದಕ್ಕೆ ಯಡಿಯೂರಪ್ಪ ಅಂದ್ರೆ ಮೋದಿಗೆ ಅಸಮಾಧಾನ ಇರಬೇಕು ಎಂದು ಎಚ್ಡಿಕೆ ಟಾಂಗ್ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...