hasanambe ಹಾಸನಾಂಬೆಯ ಅನುಗ್ರಹ ಪಡೆಯಲು ಮುಗಿಬಿದ್ದ ಭಕ್ತಸಾಗರ

hasanambe
hasanambe diety

hasanambe ಹಾಸನಾಂಬೆ ದರ್ಶನಕ್ಕೆ ಮಂಗಳವಾರ ತೆರೆ

ಹಾಸನ: ವರ್ಷಕ್ಕೊಮ್ಮ ದರುಶನ ನೀಡುವ ಹಾಸನಾಂಬೆಯ ( hasanambe ) ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಭಕ್ತಸಾಗರವೇ ಇಲ್ಲಿಗೆ ದಾಂಗುಡಿ ಇಟ್ಟಿದ್ದು, 13 ದಿನಗಳ ನಂತರ ಮಂಗಳವಾರ ಹಾಸನಾಂಬೆಯ ಈ ವರ್ಷದ ದರ್ಶನಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: 50 ಕೆಜಿ ಚಿನ್ನದಲ್ಲಿ ತಯಾರಾದ ದುರ್ಗಾ ವಿಗ್ರಹ

ಈ ಬಾರಿ 13 ದಿನ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು, ಆ ಪೈಕಿ 11 ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಪ್ರತಿನಿತ್ಯ ಸರಾಸರಿ 15ರಿಂದ 20 ಸಾವಿರ ಭಕ್ತರು ದೇವಿಯ ದರ್ಶನ ಪಡೆದಿದ್ದು, ಅದರಲ್ಲಿಯೂ ರಜಾ ದಿನಗಳಂದು ಈ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿತ್ತು ಎನ್ನಲಾಗಿದೆ.

ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ರಿಗೆ ಕಾಣಿಕೆ, ಪ್ರಸಾದ ಮಾರಾಟ ಸೇರಿದಂತೆ ಈವರೆಗೆ ದೇವಸ್ಥಾನಕ್ಕೆ ಸುಮಾರು ಒಂದೂವರೆ ಕೋಟಿಗೆ ಹೆಚ್ಚಿನ ಆದಾಯ ಸಂಗ್ರಹವಾಗಿದ್ದು, ಇದು 2 ಕೋಟಿ ರೂ ಮುಟ್ಟುವ ಅಂದಾಜು ಮಾಡಲಾಗಿದೆ.

12 ದಿನಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಸನಾಂಬೆಯ ದರ್ಶನಕ್ಕೆ ಚಾಲನೆ ನೀಡಿದ್ದರು. ಆ ಬಳಿಕ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಂಇ ಸೇರಿದಂತೆ ಗಣ್ಯರ ದೊಡ್ಡ ದಂಡೇ ದೇವಿಯ ಅನುಗ್ರಹಕ್ಕೆ ಪಾತ್ರರಾದರು. ಇನ್ನು ಮಾಜಿ ಸಚಿವ ರೇವಣ್ಣ ಅವರಂತೆ ಎಂಟು ದಿನ ದೇವಿಗೆ ನಮಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...