hasanambe hundi ಹಾಸನಾಂಬೆಯ ‘ಹುಂಡಿ’ ತುಂಬಿದ ಭಕ್ತಗಣ

hasanambe hundi
hasanambe temple in hassan

hasanambe hundi ಹಾಸನಾಂಬೆಯ ಹುಂಡಿಯಲ್ಲಿ ಸಂಗ್ರಹವಾಯ್ತು ದಾಖಲೆಯ ಹಣ

ಹಾಸನ: ಪ್ರತಿ ವರ್ಷದ ತಪ್ಪದ ವಿಸ್ಮಯ ( hasanambe hundi ) ಹಾಸನಾಂಬೆಯ ದರ್ಶನದಿಂದ ಭಕ್ತರು ಪುನೀತರಾದಂತೆಯೇ ದೇವಳದ ಹುಂಡಿ ಸಹ ಈ ಬಾರಿ ಉಬ್ಬಿದೆ.

ಇದನ್ನೂ ಓದಿ: ಹಾಸನಾಂಬೆಯ ಅನುಗ್ರಹ ಪಡೆಯಲು ಮುಗಿಬಿದ್ದ ಭಕ್ತಸಾಗರ

ಮಂಗಳವಾರ ಕದ ಮುಚ್ಚಿದ ಹಾಸನಾಂಬೆಯ ದರ್ಶನಾವಧಿಯಲ್ಲಿ ದೇವಾಲಯಕ್ಕೆ ಈ ಬಾರಿ ದಾಖಲೆಯ ಪ್ರಮಾಣದ ವರಮಾನ ಬಂದಿದೆ. 14 ದಿನಗಳ ಅವಧಿಯಲ್ಲಿ ದೇವಾಲಯದಲ್ಲಿ ಈ ವರ್ಷ 3 ಕೋಟಿಗೂ ಹೆಚ್ಚಿನ ಮೊತ್ತದ ವರಮಾನ ಸಂಗ್ರಹವಾಗಿದೆ.

ಮಂಗಳವಾರ ಹಾಸನಾಂಬೆಯ ದರ್ಶನಕ್ಕೆ ತೆರೆ ಎಳೆಯಲಾಯಿತಾದರೂ ಸೋಮವಾರವೇ ಸಾರ್ವಜನಿಕರ ದರ್ಶನವನ್ನು ಅಂತ್ಯಗೊಳಿಸಲಾಗಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು, ಗಣ್ಯರು ದೇವಿಯ ಆಶೀರ್ವಾದ ಪಡೆದರು.

ಈ ಬಾರಿ ದೇವಿಯ ದರ್ಶನ ಸಂದರ್ಭದಲ್ಲಿ ಒಟ್ಟಾರೆ 3,06,41,011/- ರೂ ಹಣ ಸಂಗ್ರಹವಾಗಿದೆ. ಗುರುವಾರ ಹಾಸನಾಂಬ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಈ ವರ್ಷ ಒಟ್ಟಾರೆ 3,06,41,011 ರೂ. ಹಣ ಸಂಗ್ರಹವಾಗಿದೆ. ವಿವಿಧ ರೀತಿಯ ಟಿಕೆಟ್‍, ಲಾಡು ಮತ್ತಿತರ ಮಾರಾಟದಿಂದ 1,75,16,587 ರೂ., ದೇವಾಲಯದ ಹುಂಡಿಯಲ್ಲಿ 1,31,24,424 ರೂ. ಹಣ ಸಂಗ್ರವಾಗಿದೆ.

ಇದೇ ವೇಳೆ ಭಾರೀ ಪ್ರಮಾಣದ ಹಣದ ಜೊತೆಗೆ ಭಕ್ತರ ನಾನಾ ಬಗೆಯ ಕೋರಿಕೆ ಪತ್ರಗಳೂ ಹುಂಡಿಯಲ್ಲಿ ಸಂಗ್ರಹವಾಗಿದೆ. ಇದರಲ್ಲಿ ಕೆವಲರು ತಮ್ಮನ್ನು ಬಿಗ್ ಬಾಸ್ ಮನೆಗೆ ಕಳುಹಿಸುವಂತೆ ಕೋರಿದರೇ ಮತ್ತೆ ಕೆಲವರು ಕೆಲಸ ಕೊಡಿಸೆಂದು ಮೊರೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...