half ವರುಣನ ಕುಹಕ, ಅರ್ಧ ಮುಳುಗಿದ ಕರ್ನಾಟಕ

half
flooded karnataka

half ಅಗಾಧ ಜಲಪ್ರಳಯ: 16 ಜಿಲ್ಲೆ, 80 ತಾಲೂಕು ಪ್ರವಾಹಪೀಡಿತ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆ ( half ) ಮತ್ತು ಅದರಿಂದ ಸೃಷ್ಟಿಯಾಗಿರುವ ಅತಿವೃಷ್ಟಿ ಪರಿಸ್ಥಿತಿಯಿಂದಾಗಿ ಬಹುತೇಕ ಅರ್ಧ ರಾಜ್ಯವೇ ಇಮದು ನೀರಿನಲ್ಲಿ ಮುಳುಗಿದಂತಾಗಿದೆ.

ಇದನ್ನೂ ಓದಿ: ಕಪಿಲೆಯ ಕೋಪ: ನಂಜನಗೂಡು, ಸುತ್ತೂರಿಗೆ ಜಲಬಂಧನ

ರಾಜ್ಯದ 16 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ ಎಂದು ಕಳೆದೆರಡು ದಿನದಿಂದ ಸಂತ್ರಸ್ತ ಪ್ರದೇಶಗಳಲ್ಲಿ ಖುದ್ದು ಅವಲೋಕನ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ಕಂಡು ಕೇಳರಿಯದಂತಹ ಸಂಕಷ್ಟ ರಾಜ್ಯಕ್ಕೆ ಎದುರಾಗಿದ್ದು, ಮಳೆ, ನೆರೆಯಿಂದ ಸದ್ಯ 6000 ಕೋಟಿ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ರಾಜ್ಯದ ಈ ಸಂಕಷ್ಟ ಸ್ಥಿತಿಯಲ್ಲಿ ತಕ್ಷಣದ ಪರಿಹಾರ ಕೈಗೊಳ್ಳಲು 3000 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಅಭೂತಪೂರ್ವ ಅತಿವೃಷ್ಠಿ ತಲೆದೂರಿದೆ. ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬೇರೆ ಸರಿ ಇಲ್ಲ, ಈ ಹಂತದಲ್ಲಿ ನಮ್ಮನ್ನು ದೇವರೇ ಕಾಪಾಡಬೇಕು ಎಂದು ಬಿಎಸ್ವೈ ಶುಕ್ರವಾರ ಹುಬ್ಬಳ್ಳಿಯಲ್ಲಿ ನುಡಿದಿದ್ದರು.

ನೆರೆಯಿಂದಾಗಿ 4000 ಮನೆಗಳು ಬಾಗಶಃ ಕುಸಿದಿದ್ದು, 86 ಸಾವಿರ ಹೆಕ್ಟೇರ್ ಕೃಷಿ ಬೆಳೆ ಮಳೆಯಿಂದ ಹಾನಿ, 3000 ಜನರ ಸ್ಥಳಾಂತರವಾಗಿದೆ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...