gulf tension ಕೊಲ್ಲಿಯಲ್ಲಿ ಯುದ್ಧ ಸ್ಥಿತಿ: ಇರಾನ್ ದಾಳಿಗೆ 80 ಅಮೆರಿಕ್ ಯೋಧರು ಮೃತ

gulf tension

gulf tension ಇನ್ನೂ 100 ನೆಲೆಗಳ ಮೇಲೆ ದಾಳಿ ಬೆದರಿಕೆ, ಅಮೆರಿಕದಿಂದ ಪ್ರತೀಕಾರ ದಾಳಿ ಸಂಭವ

ಬಾಗ್ದಾದ್: ಮೂರು ದಶಕದ ನಂತರ ಮತ್ತೆ ಕೊಲ್ಲಿ ಪ್ರದೇಶದಲ್ಲಿ ಯುದ್ಧದ ( gulf tension) ಕಾರ್ಮೋಡ ಆವರಿಸಿದೆ. ಈ ಭಾರಿ ಅಮೆರಿಕ ಮತ್ತು ಇರಾನ್ ಯುದ್ಧೋನ್ಮಾದದಲ್ಲಿ ತೊಡಗಿವೆ. ಇರಾಕಿನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ್ದು 80 ಮಂದಿ ಯೋಧರನ್ನು ಹತ್ಯೆಗೈದಿದೆ.

ಇದನ್ನೂ ಓದಿ: ಪೌರತ್ವ ಶಾಸನ ಬೆಂಬಲಿಸಲು 8866288662ಗೆ ಮಿಸ್ಡ್ ಕಾಲ್ ಮಾಡಿ

ತನ್ನ ಸೇನಾಧಿಕಾರಿ ಸುಲೇಮಾನಿಯನ್ನು ಅಮೆರಿಕ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಈ ದಾಳಿ ಮಾಡಿದೆ. ಅಲ್ಲದೇ ಇನ್ನೂ 100 ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಗಂಭೀರವಾದ ಬೆದರಿಕೆಯನ್ನು ಒಡ್ಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಇರಾನ್‌ನ ಪುಂಡಾಟವನ್ನು ಸುಮ್ಮನೆ ಸಹಿಸಿಕೊಂಡು ಕುಳಿತುಕೊಳ್ಳುವದಿಲ್ಲ ಎಂದು ಹೇಳಿದ್ದು, ತೀವ್ರ ಪ್ರತಿದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಪ್ರದೇಶದಲ್ಲಿ ಯುದ್ಧದ ವಾತಾವರಣ ನೆಲೆಯಾಗಿದೆ.

ಇರಾಕ್ ನಲ್ಲಿರುವ ಅಮೆರಿಕಾದ ಎರಡು ಸೇನಾ ನೆಲೆಗಳ ಮೇಲೆ ಇರಾನ್ ಬುಧವಾರ ಕ್ಷಿಪಣಿ ದಾಳಿ ನಡೆದಿದೆ. ನಾವು ವಿಶ್ವದಲ್ಲಿಯೇ ಅತ್ಯಂತ ಬಲಶಾಲಿ ಹಾಗೂ ಶಸ್ತ್ರ ಸಜ್ಜಿತ ರಾಷ್ಟ್ರ. ತನ್ನ ನಡೆಗೆ ಇರಾನ್‌ ತಕ್ಕ ಪ್ರತಿಫಲ ಪಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಸುಏಮಾನಿ ಅವರನ್ನು ಹತ್ಯೆ ಮಾಡಲು ಬಳಸಿದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ. ಇದಕ್ಕೆ ತೀಕಾರಕ್ಕೆ ಅಮೆರಿಕಾ ಮುಂದಾಗಿದ್ದೇ ಆದರೆ, 100 ಸ್ಥಳಗಳಿಗೆ ಗುರಿ ಇಡಲು ತಯಾರಿ ನಡೆಸಲಾಗಿದೆ ಎಂದು ಸೇನೆಯನ್ನು ಉದ್ಧರಿಸಿ ಇರಾನಿ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...