gtd meets bsy ಜೆಡಿಎಸ್‌ನಲ್ಲಿ ನನಗೆ ಬೇಸರವಾಗಿದೆ ಎಂದ ದೇವೇಗೌಡ್ರು

gtd meets bsy
mla gt dewvegowda and cm yediyurappa

gtd meets bsy ಕುತೂಹಲ ಕೆರಳಿಸಿದ ಸಿಎಂ ಯಡಿಯೂರಪ್ಪ, ದೇವೇಗೌಡ್ರ ಭೇಟಿ

ಬೆಂಗಳೂರು: ಮೈತ್ರಿ ಸರಕಾರ ಪತನದ ನಂತರ ಜೆಡಿಎಸ್‌ನಿಂದ ( gtd meets bsy ) ಮಾನಸಿಕವಾಗಿ ದೂರವಾದಮತಿರುವ ಮಾಜಿ ಸಚಿವ ಜಿಡಟಿ ದೇವೇಗೌಡ ಅವರು ಸೋಮವಾರ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಅನರ್ಹ ಶಾಸಕರ ಓಲೈಕೆಗೆ ಮುಂದಾದ ಬಿಜೆಪಿ ನಾಯಕರು

ತೀರಾ ಇತ್ತೇಚೆಗಷ್ಟೇ ಜೆಡಿಎಸ್‌ ಬಗೆಗಿನ ಅಸಮಾಧಾನ ಹೊರಹಾಕಿದ್ದ ದೇವೇಗೌಡರು ಮತ್ತೆ ಅದೇ ಮಾತುಗಳನ್ನು ಪುನರುಚ್ಛರಿಸಿದ್ದಾರೆ. ಜೆಡಿಎಸ್‌ನಲ್ಲಿ ವೈಯಕ್ತಿಕ ವಾಗಿ ನನಗೆ ಸಾಕಷ್ಟು ಬೇಸರವಾಗಿದೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.

ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ದೇವೇಗೌಡರು ಈಗಾಗಲೇ ಹೇಳಿದ್ದು ತಮ್ಮ ಸ್ಥಾನದಲ್ಲಿ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ.

ಸಿಎಂ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ದೇವೇಗೌಡರು ಹೇಳಿದರಾದರೂ ಅದು ಸಂಪುರ್ಣ ಸತ್ಯವಲ್ಲ ಎಂಬ ಗುಸುಗುಸು ಜೋರಾಗಿಯೇ ಕೇಳುತ್ತಿದೆ.

ಅನರ್ಹ ಶಾಸಕ ವಿಶ್ವನಾಥ್ ಸಂಗಡವೂ ಹಲವು ಸುತ್ತಿನ ಮಾತುಕತೆ ನಡೆಸಿರುವ ದೇವೇಗೌಡರು ಜೆಡಿಸ್‌ನಿಂದ ಹೊರಬರಲು ಸೂಕ್ತ ಸಮಯ ಹಾಗೂ ಕಾರಣಕ್ಕಾಗಿ ಕಾಯುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.

ಬಿಜೆಪಿ ಜೊತೆಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವ ದೇವೇಗೌಡರು ಅಲ್ಲೆ ತಮ್ಮ ಮುಂದಿನ ನೆಲೆ ಕಂಡುಕೊಳ್ಳಲು ವೇದಿಕೆ ಸಿದ್ಧಪಡಿಸುತ್ತಿದ್ದು, ಆ ಹಿನ್ನೆಲೆಯಲ್ಲಿಯೇ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...