gowda vetoes ನಾನು ಸಿದ್ದರಾಮಯ್ಯ ಮತ್ತೆ ಒಂದಾಗೋದು ಅಸಾಧ್ಯ: ದೇವೇಗೌಡ

gowda vetoes
former PM devegowda

gowda vetoes ಚುನಾವಣೆ ನಂತರ ಕಾಂಗ್ರೆಸ್-ದಳ ಮೈತ್ರಿ ಇಲ್ಲ ಎಂದ ದೊಡ್ಡಗೌಡ್ರು

ಬೆಂಗಳೂರು: ನಾನು ಮತ್ತು ಸಿದ್ದರಾಮಯ್ಯ ಮತ್ತೆ ಒಂದಾಗೋದು ( gowda vetoes ) ಅಸಾಧ್ಯ ಎಂದು ಹೇಳುವ ಮೂಲಕ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾ ದಳ ಮರು ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ಮಾಜಿ ಪ್ರಧಾನಿ ದೇವೇಗೌಡರು ತಿಲಾಂಜಲಿ ಹಾಡಿದ್ದಾರೆ.

ಇದನ್ನೂ ಓದಿ: ಹನಿಟ್ರಾಪ್: ಬೆಡ್‌ರೂಮಿಗೆ ಬಿಟ್ಟುಕೊಳ್ಳದೇ ಬಚಾವಾದರು ಶಾಸಕರು

ಚುಣಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟು ಗೆಲ್ಲದೇ ಹೋದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಈ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಬಳಿ 105 ಶಾಸಕರಿದ್ದಾರೆ. ಹೀಗಾಗಿ ಸರಕಾರ ಬೀಳುವ ಮಾತೆಲ್ಲಿ ಬಂತು. ಅದಾಗಬೇಕಾದರೆ ನಾಶನು ಮತ್ತು ಸಿದ್ದರಾಮಯ್ಯ ಒಂದಾಗಬೇಕು, ಆದರೆ ಅದು ಆಗದ ಹೋಗದ ಮಾತು. ಅವರ ಜೊತೆ ಕೈಜೋಡಿಸಿ ಸರಕಾರ ರಚಿಸಿದ ಮೇಲೆ ಅನುಭವಿಸಿದ ಯಾತನೆ ಮರೆತಿಲ್ಲ.

ಕಳೆದ ವರ್ಷ ಕಾಂಗ್ರೆಸ್ ಜೊತೆ ಹೋಗಿ ಎಂತಹ ತಪ್ಪು ಮಾಡಿದೆ ಎಂಬುದರ ಅರಿವು ಈಗ ಆಗಿದೆ. ಮತ್ತೆ ಮತ್ತೆ ಅದೇ ತಪ್ಪು ಮಾಡುವುದಿಲ್ಲ ಎಂದು ಮರು ಮೈತ್ರಿ ಮಾತುಗಳಿಗೆ ದೇವೇಗೌಡರು ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಚುಣಾವಣೆ ನಂತರ ಜಾತ್ಯತೀತ ಜನತಾ ದಳದ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಏಳೆಂಟು ಮಂದಿ ಕಮಲ ಹಿಡಿಯಲು ಸಿದ್ಧರಿದ್ದಾರೆ ಎಂಬ ವರದಿಗಳೆಲ್ಲ ಶುದ್ಧ ಸುಳ್ಳು. ನಮ್ಮ ಪಕ್ಷದವರಾರೂ ಬಿಜೆಪಿಗೆ ಹಾರುವುದಿಲ್ಲ ಎಂದು ಗೌಡರು ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...