gowda ಮನೆ ಖಾಲಿ ಮಾಡಿ: ದೇವೇಗೌಡ್ರಿಗೆ ಬಿಜೆಪಿ ಸರಕಾರದ ಗಡುವು

gowda
former PM devegowda

gowda ದಿಲ್ಲಿ ಪ್ರವಾಸಿ ಬಂಗಲೆ ತೆರವು ಮಾಡಲು ಮಾಜಿ ಪಿಎಂಗೆ ನೋಟೀಸ್

ಹೊಸದಿಲ್ಲಿ: ತಾವು ಪ್ರಧಾನಿ ಆದಾಗಿನಿಂದ ದಿಲ್ಲಿಯಲ್ಲಿ ಬಳಸುತ್ತಿರುವ ( gowda) ಪ್ರವಾಸಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರಕಾರ ಮಾಜಿ ಪಿರಂ ದೇವೇಗೌಡರಿಗೆ ನೋಟೀಸ್ ಜಾರಿ ಮಾಡಿದೆ.

ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿಯ ಆಪ್ತಮಿತ್ರ: ಸಿದ್ದರಾಮಯ್ಯ ಟಾಂಗ್

ದಿಲ್ಲಿಯಲ್ಲಿ ಮಾಜಿ ಪಿಎಂಗೆ ನೀಡುವ ಅಧಿಕೃತ ನಿವಾಸದ ಜೊತೆಗೆ ದೇವೇಗೌಡರು ಪ್ರವಾಸಿ ಬಂಗಲೆಯೊಮದನ್ನು ಸಹ ಬಳಸುತ್ತಿದ್ದರು. ಈಗ ಈ ಪ್ರವಾಸಿ ಬಂಗಲೆಯನ್ನು ತೆರವು ಮಾಡುವಂತೆ ಅವರಿಗೆ ಸೂಚಿಸಲಾಗಿದೆ.

ಈ ಸಂಬಂಧ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ದೇವೇಗೌಡರಿಗೆ ಪತ್ರ ಬರೆದಿದ್ದು ಆದಷ್ಟು ಬೇಗ ಪ್ರವಾಸಿ ಬಂಗಲೆಯನ್ನು ತೆರವು ಮಾಡುವಂತೆ ಸೂಚಿಸಿದೆ.

ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಸೋತ ಬೆನ್ನಲ್ಲಿಯೇ ದೇವೇಗೌಡರು ಈ ಬಂಗಲೆಯನ್ನು ಲೋಕಸಭಾ ಸಚಿವಾಲಯಕ್ಕೆ ಹಿಂತಿರುಗಿಸಿದ್ದರು ಎಂದು ಅವರಿಗೆ ಆಪ್ತವಾಗಿರುವ ಮೂಲಗಳು ಹೇಳುತ್ತಿವೆ.

ಈ ಬಂಗಲೆಯನ್ನು ಈಗಾಗಲೇ ಗೌಡರು ಸಂಬಂಧಪಟ್ಟ ಸಚಿವಾಲಯಕ್ಕೆ ಹಿಂತಿರುಗಿಸಿದ್ದಾಗಿದೆ. ಹೀಗಿದ್ದರೂ ನೋಟೀಸ್ ನೀಡಿರುವ ಮರ್ಮ ಏನು ಎಂದು ಈ ಮೂಲಗಳು ಪ್ರಶ್ನಿಸಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...