governor vala ಉಪ ಚುನಾವಣೆವರೆಗೆ ರಾಜ್ಯಪಾಲ ವಾಲಾ ಸೇಫ್

governor vala
governor vajubhai vala

governor vala ಸೇವಾವಧಿ ಮುಗಿದಿದ್ದರೂ ವಾಲಾ ಕೈಹಿಡಿದ ರಾಜಕೀಯ ಅಸ್ಥಿರತೆ

ಬೆಂಗಳೂರು: ಮುಂಬರುವ ಉಪಚುನಾವಣೆ ಸರಕಾರದ ( governor vala ) ಭವಿಷ್ಯ ಮಾತ್ರವಲ್ಲ ರಾಜ್ಯಪಾಲರ ಭವಿಷ್ಯವನ್ನೂ ನಿರ್ಧರಿಸಲಿದೆ! ಹೌದು ಉಪಚುನಾವಣೆ ಫಲಿತಾಂಶ ನೋಡಿಕೊಂದು ಅವರನ್ನು ಹುದ್ದೆಯಲ್ಲಿ ಮುಂದುವರಿಸುವ ಅಥವ ಬದಲಿಸುವ ನಿಧಾರವನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ.

ಇದನ್ನೂ ಓದಿ: ಅನರ್ಹ ಶಾಸಕರಿಗೂ ನಮಗೂ ಸಂಬಂಧ ಇಲ್ಲ ಎಂದ ಯಡಿಯೂರಪ್ಪ

ರಾಜ್ಯಪಾಲ ವಜೂಭಾಯಿ ವಾಲಾ ಅವರ ಸೇವಾವಧಿ ಕಳೆದ ಆಗಸ್ಟ್ 31ರಂದೇ ಮುಗಿದಿದ್ದರೂ ಈವರೆಗೆ ಅವರ ಸ್ಥಾನಕ್ಕೆ ಯಾರೂ ನಿಯುಕ್ತಿಗೊಂಡಿಲ್ಲ. ಹಾಗೆಂದು ವಾಲಾ ಅವರ ಸೇವಾವಧಿಯ ವಿಸ್ತರಣೆಯೂ ಆಗಿಲ್ಲ. ಈ ವಿಚಾರದಲ್ಲಿ ಅಂತಿಮ ತೀರ್ಮಾನ ಚುನಾವಣಾ ಫಲಿತಾಂಶವನ್ನು ಅವಲಂಬಿಸಿದೆ ಎನ್ನಲಾಗಿದೆ.

ಸೇವಾವಧಿ ಮುಗಿದ ನಂತರ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ಹಲವರ ಹೆಸರು ಕೇಳಿಬಂದಿತ್ತು. ಆದರೆ ಯಡಿಯೂರಪ್ಪ ಸರಕಾರ ಆಗಷ್ಟೇ ರಚನೆಯಾಗಿದ್ದ ಕಾರಣ ರಾಜ್ಯಪಾಲರ ಬದಲಾವಣೆ ಬಗ್ಗೆ ಕೇಂದ್ರ ಆಸ್ಥೆ ತೋರಲಿಲ್ಲ.

ಶಾಸಕರ ಅರ್ನಹತೆ ಇತ್ಯರ್ಥವಾಗುವ ತನಕ ರಾಝಕೀಯ ಅಸ್ಥಿರತೆ ಇರುವ ಕಾರಣ ಸದ್ಯಕ್ಕೆ ವಾಲಾ ಬದಲಾವಣೆ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸುಪ್ರೀಂ ಕೋರ್ಟಿನ ತೀರ್ಪು ಮತ್ತು ಉಪಚುನಾವಣೆ ಇವೆರಡೂ ವಾಲಾ ಅವರಿಗೆ ವರವಾಗಿ ಪರಿಣಮಿಸಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಸೇವಾವಧೀ ಮುಗಿದಿದ್ದರೂ ಹೊಸ ರಾಜ್ಯಪಾಲರ ನೇಮಕದವರೆಗೂ ಮುಂದುವರಿಯಲು ಸಂವಿಧಾನದಲ್ಲಿ ಅವಕಾಶವಿದ್ದು, ವಾಲಾ ಅವರ ವಿಚಾರದಲ್ಲಿಯೂ ಇದೇ ಉಪಕ್ರಮ ಅನುಸರಿಸಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...