golden durga 50 ಕೆಜಿ ಚಿನ್ನದಲ್ಲಿ ತಯಾರಾದ ದುರ್ಗಾ ವಿಗ್ರಹ

golden durga
durga idol made pf gold at kolkotta pendal

golden durga 50 ಲಕ್ಷ ರೂ ವೆಚ್ಚದಲ್ಲಿ ಕೋಲ್ಕೊತ್ತಾದ ಪೆಂಡಾಲ್‌ನಲ್ಲಿ ದುರ್ಗೆ ವಿರಾಜಮಾನ

ಕೋಲ್ಕೊತ್ತಾ: ದೇವರಿಗೆ ಭಕ್ತಿಯ ಪ್ರದರ್ಶನದಲ್ಲಿ ನಾನಾ ವಿಧ. ಹರಕೆಯ ( golden durga) ನೆವದಲ್ಲಿ ಕೋಟ್ಯಂತರ ರೂ ಬೆಲೆಬಾಳುವ ಆಭರಣಗಳಿಂದ ತಮ್ಮಿಷ್ಟ ದೇವರನ್ನು ಅಲಂಕರಿಸುವ ಭಕ್ತರಿಗೇನೂ ಕೊರತೆಯಿಲ್ಲ. ನವರಾತ್ರಿ ಎಂದರೆ ಕೋಲ್ಕತ್ತಾದ ದುರ್ಗಾ ಪೆಂಡಾಲ್‌ಗಳಿಗೆ ಜೀವ ಬರುತ್ತದೆ. ದುರ್ಗೆಯನ್ನ ನಾನಾ ರೂಪಗಳಲ್ಲಿ ಸಿಂಗರಿಸಿ ಪೂಜಿಸಲಾಗುತ್ತದೆ.

ಇದನ್ನೂ ಓದಿ: ದಸರೆ ಎಂದರೆ ಸಂಭ್ರಮ, ನಾನು ದೇವಿಯ ಆರಾಧಕಿ: ರಚಿತಾರಾಮ್

ಈ ಬಾರಿ ದುರ್ಗ ಪೆಂಡಾಲ್‌ಗಳಲ್ಲಿ ಅತಿ ವಿಶಿಷ್ಟವಾಗಿ ಸದ್ದು ಮಾಡುತ್ತಿರುವುದು ಸಂತೋಷ್ ಮಿತ್ರಾ ವೃತ್ತದಲ್ಲಿರುವ ಪೆಂಡಾಲ್. ಏನಿದರ ವೈಶಿಷ್ಟ್ಯ ಎಂದರೆ ಇಲ್ಲಿ ಕೂರಿಸಲಾಗಿರುವ ದುರ್ಗಾ ಮಾತೆಯ ವಿಗ್ರಹ ಚಿನ್ನದಿಂದಲೇ ಮಾಡಲಾಗಿದೆ.

ಇಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು 50 ಕೆಜಿ ಚಿನ್ನದಲ್ಲಿ ತಯಾರು ಮಾಡಲಾಗಿದೆ. ಇದಕ್ಕೆ ಹತ್ತತ್ರ 50 ಲಕ್ಷಕ್ಕೂ ಮಿಗಿಲಾಗಿ ಖರ್ಚು ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ. ಇನ್ನೊಂದು ವಿಶೇಷವೆಂದರೆ ಇತರ ಮೂರ್ತಿಗಳಂತೆ ಇದನ್ನು ವಿಸರ್ಜಿಸುವುದಿಲ್ಲ ಎಂದು ಪೆಂಡಾಲ್ ಮಾಲೀಕರು ಹೇಳುತ್ತಿದ್ದಾರಂತೆ.

ಇಷ್ಟು ಭವ್ಯವಾದ ಮೂರ್ತಿಯನ್ನು ಇಟ್ಟ ಮೇಲೆ ಪೆಂಡಾಲ್ ಕೂಡ ಅಷ್ಟೇ ವೈಭವೋಪೇತವಾಗಿಬೇಕಲ್ಲ. ಅದೂ ಕೂಡ ಇಲ್ಲ ಸಾಕಾರಗೊಂಡಿದೆ. ಪ್ರಖ್ಯಾತ ಶೀಶ್ ಮಹಲ್‌ನಂತೆ ಕಾಣುವ ಪೆಂಡಾಲನ್ನು 10 ಸಾವಿರ ಗಾಜಿನ ತುಂಡುಗಳಿಂದ ತಯಾರು ಮಾಡಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...