george summoned ಡಿಕೆಶಿ ಆಯ್ತು ಈಗ ಜಾರ್ಜ್‌‌ಗೆ ’ಜಾರಿ’ ಕಂಟಕ

george summoned

george summoned ವಿದೇಶಗಳಲ್ಲಿ ಹೂಡಿಕೆ ಸಂಬಂಧ ಜಾರ್ಜ್‌‌ರನ್ನು ವಿಚಾರಣೆಗೆ ಕರೆದ ಇಡಿ

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್‍ ನಂತರ ಈಗ (george summoned) ಜಾರಿ ನಿರ್ದೇಶನಾಲಯದ ಕಣ್ಣು ಮತ್ತೋರ್ವ ಮಾಜಿ ಸಚಿವ ಕೆಜೆ ಜಾರ್ಜ್ ಅವರ ಮೇಲೆ ಬಿದ್ದಿದೆ. ವಿದೇಶಗಳಲ್ಲಿ ಕೆಲ ಹೂಡಿಕೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಜಾರ್ಜ್‌ ಅವರಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: 100 ಕೋಟಿ ಆದಾಯ: ಕುಕ್ಕೆ ಸುಬ್ರಹ್ಮಣ್ಯನೇ ರಾಜ್ಯದ ಶ್ರೀಮಂತ ದೇವರು

ಇಡಿ ಅಧಿಕಾರಿಗಳು ಜನವರಿ 16ರಂದು ವಿಚಾರಣೆಗೆ ಃಆಜರಾಗುವಂತೆ ಜಾರ್ಜ್ ಮತ್ತು ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಒಂದು ವಾರದ ಹಿಂದೆಯೇ ಸಮನಸ್ಸ್ ಜಾರಿ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಜಾರ್ಜ್‌ ಅವರು ದೇಶ ವಿದೇಶದಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಜಾರ್ಜ್‌ ಅವರು ಲೋಕಾಯುಕ್ತರ ಬಳಿ ಘೋಷಣೆ ಮಾಡಿಕೊಂಡಿರುವ ಆಸ್ತಿಯ ದಾಖಲೆಗಳನ್ನೇ ಆಧಾರವಾಗಿಟ್ಟುಕೊಂಡು ಜಾರಿ ನಿದೇಶನಾಲಯ ಈ ದೂರಿನ ಕುರಿತಾಗಿ ಪ್ರಾಥಮಿಕ ತನಿಖೆ ನಡೆಸಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...