ganesha pooja ವಿಘ್ನ ವಿನಾಶಕ ಗಣಪನನ್ನು ಹೀಗೆ ಪೂಜಿಸಿ

ganesha pooja
Lord Ganesha

ganesha pooja ಮೂರ್ತಿ ಯಾವ ದಿಕ್ಕಿನಲ್ಲಿಡಬೇಕು? ಇಲ್ಲಿ ಓದಿ

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಪೂಜೆಯಲ್ಲೂ ಮೊದಲು ಆರಾಧಿಸುವುದು ( ganesha pooja ) ಗಣಪತಿಯನ್ನೇ. ಹೊಸ ಕಾರ್ಯಗಳಿಗೆ ಯಾವುದೇ ವಿಘ್ನ ಬಾರದಿರಲಿ ಎಂಬುದಕ್ಕೆ ಮೊದಲು ಗಣೇಶನನ್ನು ಆರಾಧಿಸುವುದುಂಟು.

ಇದನ್ನೂ ಓದಿ: ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕಾಯಿ ಗಣೇಶ

ವರ್ಷಂಪ್ರತಿ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಗಣೇಶ ಕೈಲಾಸದಿಂದ ಭೂಮಿಗೆ ಬರುತ್ತಾನೆಂದು ನಮ್ಮ ಪುರಾಣಗಳಲ್ಲಿ ನಂಬಿಕೆ. ಹೀಗಾಗಿಯೇ ಅಂದು ಗಣೇಶ ಚತುರ್ಥಿಯೆಂದು ಆಚರಣೆ ಮಾಡಲಾಗುತ್ತದೆ.

ಪೂಜೆಗೆ ಮುನ್ನ ಉಪವಾಸ ಇರಲು ಮರೆಯದಿರಿ

ಗಣಪತಿ ಪೂಜೆ ಮಾಡುವವರು, ವ್ರತ ಇರುವವರು ಚತುರ್ಥಿ ದಿನದಂದು ಸೂರ್ಯ ಹುಟ್ಟುವುದಕ್ಕೂ ಮುದಲೇ ಎದ್ದು ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಶುದ್ಧ ನೀರಿನಲ್ಲಿ ಸ್ನಾನ ಮಾಡಬೇಕು.
ವ್ರತದ ಸಮಯದಲ್ಲಿ ಪ್ರತಿg ಕ್ಷಣ ಗಣಪನ ಜಪ ಮಾಡಬೇಕು.

ಗಣಪತಿ ವ್ರತ ಮಾಡುವವರು ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ಗಣಪನನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದಿನವೆಲ್ಲ ಉಪವಾಸ ಇರಬೇಕು. ವ್ರತ ಮಾಡುವವರು ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು.

ಅಷ್ಟದಳ ಪದ್ಮ ರಂಗೋಲಿ

ಪೂಜೆ ಮಾಡುವವರು ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿಯನ್ನು ಹಾಕಬೇಕು. ರಂಗೋಲಿ ಹಾಕುವಾಗ ದೇವತೆಗಳ ಹೆಸರು ಅಥವಾ ದೇವರ ರೂಪದ ರಂಗೋಲಿಯನ್ನು ಬಿಡಿಸಬಾರದು.

ಸ್ಥಳದಲ್ಲಿ ಅಷ್ಟದಳದ ಪದ್ಮ ರಂಗೋಲಿಯನ್ನು ಬಿಡಿಸಬೇಕು. ನಂತರ ಅದಕ್ಕೆ ಅರಿಶಿನ ಕುಂಕುಮ ಅರ್ಪಿಸಬೇಕು.
ಇದರ ಮೇಲೆ ತಟ್ಟೆಯೊಂದನ್ನು ಇಟ್ಟು ಮುಷ್ಟಿಯಲ್ಲಿ 5 ಹಿಡಿ ಅಕ್ಕಿ ಹಾಕಬೇಕು. ನಂತರ ಇದರ ಮೇಲೆ ಕಲಶ ಸ್ಥಾಪಿಸಬೇಕು.

ಕಲಶ ಸ್ಥಾಪನೆಗೆ ಶುದ್ಧವಾದ ಒಂದು ಚೊಂಬನ್ನು ತೆಗೆದುಕೊಂಡು ಅದರಲ್ಲಿ ತುಂಬಿದ ಬಿಂದಿಗೆಯ ಶುದ್ಧ ನೀರು ಹಾಕಿ. ಅದರ ಸುತ್ತಲೂ ಐದು ವೀಳ್ಯದೆಲೆ ಇಡಬೇಕು. ನಂತರ ಇದರ ಮೇಲೆ ತಂಗಿನಕಾಯಿ ಇಡಬೇಕು. ತಯಾರಾದ ಈ ಕಲಶವನ್ನು ಅಕ್ಕಿ ಹರಡಿದ ತಟ್ಟೆ ಮೇಲೆ ಕಲಶ ಇಡಬೇಕು.

ಪುರ್ವ ದಿಕ್ಕಿನಲ್ಲಿ ಹಣಪನನ್ನು ಕೂರಿಸಿ

ಗಣಪತಿ ಮೂರ್ತಿ ಸ್ಥಾಪನೆಯನ್ನು ಪೂರ್ವ ದಿಕ್ಕಿನಲ್ಲಿ ಮಾಡಬೇಕು. ಈ ದಿಕ್ಕು ಸಾಧ್ಯವಾಗದಿದ್ದ ಪಕ್ಷದಲ್ಲಿ ಪೂಜಕನ ಮುಖವು ದಕ್ಷಿಣ ದಿಕ್ಕಿಗೆ ಬರದಂತೆ ಮೂರ್ತಿಯನ್ನು ಸ್ಥಾಪಿಸಬೇಕು.

ಗಣೇಶನ ಮೂರ್ತಿಯನ್ನು ಸ್ಥಾಪನೆ ಮಾಡುವಾಗ ಕೆಳಗೆ ಹಾಕುವ ಮಣೆಯ ಮಧ್ಯಭಾಗದಲ್ಲಿ 1 ಮುಷ್ಠಿ ಅಕ್ಷತೆಯನ್ನು ಇಡಬೇಕು. ಇದರ ಮೇಲೆ ಕುಂಕುಮದಿಂದ ಸ್ವಸ್ತಿಕ್ ರಂಗೋಲಿಯನ್ನು ಬಿಡಸಿರಬೇಕು. ನಂತರ ಇದರ ಮೇಲೆ ಗಣೇಶ ಮೂರ್ತಿಯನ್ನು ಇಡಬೇಕು.

ನಂತರ ಗಣಪನ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ಗಣಪನ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ಹೂವನ್ನು ಅರ್ಪಿಸಿ ನಮಸ್ಕರಿಸಬೇಕು.

ಗಣಪನಿಗೆ ಪೂಜೆ ಮಾಡುವುದಕ್ಕೂ ಮೊದಲೇ ಗಣೇಶನಿಗೆ ಇಷ್ಟವಾಗುವ ಕರಿಗಡುಬು, ಮೋದಕ, ಎಳ್ಳುಂಡೆ, ಲಾಡುಗಳ ನೈವೇದ್ಯಗಳನ್ನು ಮಡಿಯಿಂದ ತಯಾರು ಮಾಡಿಕೊಂಡಿರಬೇಕು.

ಬಲಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಮತ್ತು ಸಮರ್ಪಯಾಮಿ ಎನ್ನುವಾಗ ಆ ನೀರನ್ನು ಮಹಾದೇವ ಶಿವ, ಗೌರಿ ಮತ್ತು ಸಿದ್ಧಿ ವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಬೇಕು. ನಂತರ ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...