gadkari ಪೆಟ್ರೋಲ್, ಡೀಸೆಲ್ ವಾಹನಗಳ ನಿಷೇಧ ಇಲ್ಲ

gadkari
union minister nitin gadkari's assurance to auto industry

gadkari ಆಟೋದ್ಯಮಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ

ಹೊಸದಿಲ್ಲಿ: ದೇಶದಲ್ಲಿ ಇಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಬಳಕೆಗೆ ( gadkari ) ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಗೊಳಿಸಬಹುದೆಂಬ ವದಂತಿಗಳಿಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ದಿಕ್ಕೆಟ್ಟ ಎಕಾನಮಿ: 2 ದಿನ ಬಾಗಿಲು ಬಾಗಿಲು ಬಂದ್ ಮಾಡಿದ ಮಾರುತಿ

ಪೆಟ್ರೋಲ್ ಅಥವ ಡೀಸೆಲ್ ಚಾಲಿತ ವಾಹನಗಳನ್ನು ನಿಷೇಧಿಸುವ ಇಲ್ಲವೇ ಅವುಗಳ ಉತ್ಪಾದನೆ ತಡೆಯುವ ಯಾವುದೇ ಉದ್ದೇಶ ಸರಕಾರದ ಮುಂದಿಲ್ಲ ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಆಟೋದ್ಯಮ ಹಿಂದೆಂದೂ ಕಾಣದ ಹಿಂಜರಿತ ಅನುಭವಿಸುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬರುವ ಪರಿಸ್ಥಿತಿ ಬಂದಿದೆ. ಮೇಲಾಗಿ ಎಲ್ಲ ಪ್ರಮುಖ ಕಂಪೆನಿಗಳು ತಮ್ಮ ಉತ್ಪಾದನೆಯ ಪ್ರಮಾಣವನ್ನು ಗಮನಾರ್ಹವಾಗಿ ಇಳಿಮುಖಗೊಳಿಸಿವೆ.

ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗಡ್ಕರಿ ಅವರ ಈ ಸಾಂತ್ವನದ ಮಾತು ಉದ್ದಿಮೆದಾರರಿಗೆ ಕೊಂಚ ನಿರಾಳ ತರಲಿಕ್ಕೆ ಸಾಕು ಎನ್ನಬಹುದಾಗಿದೆ. ಇದೇ ವೇಳೆ ವಾಹನೋದ್ಯಮ ತೀವ್ರ ಸಂಕಷ್ಟದಲ್ಲಿರುವುದನ್ನು ಒಪ್ಪಿಕೊಂಡ ಸಚಿವರು ಸರಕಾರ ಇದಕ್ಕೆ ಸಂದಿಸಲಿದೆ ಎಂಬ ಭರವಸೆ ನೀಡಿದ್ದಾರೆ.

ತೀವ್ರ ಬೇಡಿಕೆ ಕುಸಿತದಿಂದಾಗಿ ಕಂಗಾಲಾಗಿರುವ ವಾಹನ ಉದ್ಯಮದ ನೆರವಿಗೆ ಬರಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಜಿಎಸ್‍ಟಿ ಮಂಡಳಿ ಸಭೆ ಸೇರಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...