food inflation ಜನಸಾಮಾನ್ಯರ ಉಬ್ಬುಸ ಏರಿಸಿರುವ ಹಣದುಬ್ಬರ

food inflation
indian currency

food inflation ಆರ್ಬಿಐ ಅಂಕೆ ಮೀರಿ ಸಾಗಿದ ಹಣದುಬ್ಬರ ದರ

ಹೊಸದಿಲ್ಲಿ: ಹಣದುಬ್ಬರದ ಅಂಕೆ ಮೀರಿ ಹಣದುಬ್ಬರ ಏರಿಕೆ ಕಂಡಿದ್ದು, ( food inflation) ಮೊಲದೇ ಕುಸಿತದಲ್ಲಿರುವ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಭಾರೀ ಪೆಟ್ಟು ನೀಡಿದೆ.

ಇದನ್ನೂ ಓದಿ: ಪೌರತ್ವ ಕಾಯ್ದೆ ಬೆಂಬಲಿಸಿ ಮೋದಿಗೆ 5.5 ಲಕ್ಷ ಮಂದಿ ಪತ್ರ

ಗ್ರಾಹಕ ದರ ಸೂಚಿಯ ಆಧಾರದ ಮೇಲೆ ಡಿಸೆಂಬರ್‍ ತಿಂಗಳಿಗೆ ಸಗಟು ಹಣದುಬ್ಬರ ಶೇ. 7.35ಕ್ಕೆ ಏರಿಕೆ ಕಂಡಿದೆ. ಆಹಾರ ಪದಾರ್ಥಗಳ ದರಗಳಲ್ಲಿ ಸತತ ಏರಿಕೆಯಿಂದಾಗಿ ಹಣದುಬ್ಬರ ಭಾರೀ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.

೨೦೧೮ರ ಇದೇ ಅವಧಿಯಲ್ಲಿ ಹಣದುಬ್ಬರ ಶೇ. 2.11 ಇದ್ದರೇ ಕಳೆದ ನವೆಂಬರ್‍ ತಿಂಗಳಲ್ಲಿ ಉಬ್ಬರದ ಪ್ರಮಾಣ ಶೇ. 5.54 ಇತ್ತು. ಈಗ ಒಂದೇ ತಿಂಗಳಲ್ಲಿ ಸುಮಾರು ಶೇ. 2ರಷ್ಟು ಏರಿಕೆ ಕಂಡಿದೆ.

ಕಳೆದ ನವೆಂಬರ್‌ನಲ್ಲಿ ಶೇ. ೧೦ರ ಆಸುಪಾಸಿನಲ್ಲಿದ್ದ ಆಹಾರ ಪದಾರ್ಥಗಳ ಹಣದುಬ್ಬರ 30 ದಿನಗಳಲ್ಲಿ ಶೇ. ನಾಲ್ಕರಷ್ಟು ಏರಿಕೆ ಕಂಡಿರುವ ಕಾರಣ ಹಣದುಬ್ಬರ ರಿಸರ್ವ್‌ ಬ್ಯಾಂಕಿನ ಎಚ್ಚರಿಕೆಯ ಮಿತಿಯನ್ನು ಮೀರಿ ಬೆಳೆದಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...