fixing ಕಳ್ಳಾಟ: ಕರ್ನಾಟಕದ ರಣಜಿ ಆಟಗಾರರಾದ ಗೌತಂ, ಖಾಜಿ ಬಂಧನ

fixing
abrar kazi and cm gowtham

fixing ಕೆಪಿಎಲ್‌ ಫೈನಲ್ ಪಂದ್ಯವನ್ನೇ ಫಿಕ್ಸ್ ಮಾಡಿದ ಭೂಪರಿವರು

ಬೆಂಗಳೂರು: ಕರ್ನಾಟಕದ ರಣಜಿ ಆಟಗಾರರಾದ ( fixing ) ವಿಕೆಟ್ ಕೀಪರ್‍ ಸಿಎಂ ಗೌತಂ ಹಾಗೂ ಅಬ್ರಾರ್ ಖಾಜಿ ಅವರನ್ನು ಕೆಪಿಎಲ್‌ನಲ್ಲಿ ಕಳ್ಳಾಟದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ದಿಲ್ಲಿ ಕೋಟೆ ಗೆದ್ದ ಬಾಂಗ್ಲಾ: ಭಾರತ 148, ಬಾಂಗ್ಲಾ 154

ಬಳ್ಳಾರಿ ಟಸ್ಕರ್ಸ್‌ ತಂಡದ ನಾಯಕನಾಗಿದ್ದ ಸಿಎಂ ಗೌತಂ ಮತ್ತ ಅದೇ ತಂಡದಲ್ಲಿದ್ದ ಅಬ್ರಾರ್ ಖಾಜಿ ಕೆಪಿಎಲ್‌ ಫೈನಲ್ ಪಂದ್ಯದಲ್ಲಿ ಬುಕ್ಕಿಗಳಿಂದ ಹಣ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಸದರಿ ಫೈನಲ್ ಪಂದ್ಯದಲ್ಲಿ ನೀಧಾನ ಗತಿಯಲ್ಲಿ ಆಡುವ ಸಲುವಾಗಿ ಬುಕ್ಕಿಗಳಿಂದ 20 ಲಕ್ಷ ರೂ (28 ಸಾವಿರ ಡಾಲರ್‍) ಪಡೆದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಬಳ್ಳಾರಿ ತಂಡವು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಸೋಲನುಭವಿಸಿ ರನ್ನರ್‍ ಅಪ್ ಆಗಿತ್ತು

ಇದು ಮಾತ್ರವಲ್ಲದೇ ಇದಕ್ಕೆ ಮುಂಚೆ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ನಡೆದ ಕಪಿಎಲ್‌ನ ಲೀಗ್ ಹಂತ ಪಂದ್ಯವನ್ನು ಸಹ ಫಿಕ್ಸ್ ಮಾಡುವಲ್ಲಿ ಈ ಇಬ್ಬರು ಆಟಗಾರರು ನೆರವಾಗಿದ್ದರು ಎಂದು ಆರೋಪ ಮಾಡಲಾಗಿದೆ.

ಕರ್ನಾಟಕ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದ ವಿಕೆಟ್ ಕೀಪರ್‍ ಬ್ಯಾಟರ್‍ ಗೌತಮ ರಾಜ್ಯ ತಂಡವು 2013-2015ರ ಅವಧಿಯಲ್ಲಿ ಸತತವಾಗಿ ರಣಜಿ, ದುಲೀಪ್ ಹಾಗೂ ಹಜಾರೆ ಟ್ರೋಫಿ ಗೆದ್ದ ತಂಡದ ಸದಸ್ಯರಾಗಿದ್ದರು. ಈ ಸಾಲಿನಲ್ಲಿ ಅವರು ಗೋವಾಕ್ಕೆ ಆಡುವವರಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...