fire doused ಪ್ರಧಾನಿ ಮೋದಿ ಮನೆ ಆವರಣದಲ್ಲಿ ಬೆಂಕಿ ಶಮನ

fire doused
pm house

fire doused ಶಾರ್ಟ್ ಸರ್ಕೀಟ್‍ನಿಂದ ಕಾಣಿಸಿಕೊಂಡ ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ( fire doused ) ಅವರ ನಿವಾಸದ ಹೊರ ಆವರಣದಲ್ಲಿ ಕಾಣಿಸಿಕೊಂಎ ಬೆಂಕಿಯನ್ನು ಅಗ್ನಿ ಶಾಮಕ ದಳ ನಂದಿಸಿದ್ದು, ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಅಪಾಯಗಳಾಗಿಲ್ಲ.

ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪನಿಗೆ ಈ ಬಾರಿ ಬಂಪರ್ ಆದಾಯ

ಪ್ರಧಾನಿ ಮೋದಿ ವಾಸಿಸುವ ನಂಬರ್ 7 ಲೋಕ ಕಲ್ಯಾಣ ಮಾರ್ಗದ ನಿವಾಸದ ಹೊರ ಾವರಣದಲ್ಲಿ ಸೋಮವಾರ ರಾತ್ರಿ 7.25ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳಕ್ಕೆ 9 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸಿದವು.

ಪಿಎಂ ವಾಸಿಸುವ ಻ಥವ ಕರ್ತವ್ಯ ನಿರ್ವಹಿಸುವ ಪ್ರದೇಶ ಹೊರತಾಗಿ ಭದ್ರತಾ ಸಿಬ್ಬಂದಿ ವಾಸಿಸುವ ಕೊಠಢಿಗಳಿರುವ ಪ್ರದೇಶದಲ್ಲಿ ವಿಸ್ಯುತ್ ಶಾರ್ಟ್ ಸರ್ಕೀಟ್‍ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಪಿಎಂ ಕಚೇರಿ ಹೇಳಿದೆ.

ಈ ಅವಘಡದಲ್ಲಿ ಯಾರಿಗೂ ಯಾವುದೇ ರೀತಿಯ ಅಪಾಯ ಅಥವ ಗಾಯಗಳಾಗಿಲ್ಲ ಎಂದು ಪ್ರಧಾನ ಮಂತ್ರಿ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ. ಒಂಬತ್ತು ಅಗ್ನಿ ಶಾಮಕ ದಳದ ವಾಹನಗಳಲ್ಲಿ ಬಂದ ಸಿಬ್ಬಂದಿ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...