film awards ಚಿತ್ರ ಪ್ರಶಸ್ತಿ: ನಾತಿಚರಾಮಿಗೆ ಬಂಪರ್‍, ಕೆಜಿಎಫ್‌, ಸರಕಾರಿ ಶಾಲೆಗೆ ರಾಷ್ಟ್ರ ಗರಿ

film awards
yash and shruthi hariharan

film awards ರಾಕಿಭಾಯ್ ಚಿತ್ರಕ್ಕೆ ಅತ್ಯುತ್ತಮ ಸಾಹಸ ಚಿತ್ರದ ಗರಿಮೆ, ರಿಶಬ್ ಶೆಟ್ಟಿ ಚಿತ್ರಕ್ಕೂ ಪ್ರಶಸ್ತಿ, ರೋಹಿತ್ ಅತ್ಯುತ್ತಮ ಬಾಲನಟ

ಬೆಂಗಳೂರು: ಪ್ರಸಕ್ತ ಸಾಲಿನ ರಾಷ್ಟ್ರೀಯ ಚಲಮಚಿತ್ರ ಪ್ರಶಸ್ತಿಗಳನ್ನು ( film awards ) ಘೋಷಿಸಲಾಗಿದ್ದು ಕನ್ನಡದ ನಾತಿಚರಾಮಿ ಹಾಗೂ ಯಶ್ ಅಭಿನಯದ ಕೆಜಿಎಫ್ ಮತ್ತು ರಿಶಬ್ ಶೆಟ್ಟಿ ನಿದೇರ್ಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಗಳಿಗೆ ಗರಿ ಮೂಡಿದೆ.

ಇದನ್ನೂ ಓದಿ: ಫೊಟೋ ಶೂಟ್‌ನಲ್ಲಿ ದೀಪಿಕಾ ಲಕಲಕ

ಶ್ರುತಿ ಹರಿಹರನ್ ನಟಿಸಿರುವ ನಾತಿಚರಾಮಿ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಮಾತ್ರವಲ್ಲದೇ ಐದು ಇತರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ. ಅಷ್ಟೇ ಅಲ್ಲದೇ ಚಿತ್ರ ನಾಯಕ ನಟಿ ಶ್ರುತಿ ಹರಿಹರನ್ ಅವರಿಗೆ ಜ್ಯೂರಿ ಪ್ರಶಂಸೆ ಸಹ ವ್ಯಕ್ತವಾಗಿದೆ.

ಇದೇ ವೇಳೆ ಕನ್ನಡ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗವನ್ನೇ ಮೂಕವಿಸ್ಮಿತಗೊಳಿಸಿದ ರಾಕಿಂಗ್ ಸ್ಟಾರ್‍ ಯಶ್ ಅಭಿನಯದ ಕೆಜಿಎಫ್ ಚಿತ್ರವು ಅತ್ಯುತ್ತಮ ಸಾಹಸ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಇನ್ನು ಭರ್ಜರಿ ಜನಪ್ರಿಯ ಚಿತ್ರವಾಗಿ ಹೊರಹೊಮ್ಮಿದ್ದ ಸರಕಾರಿ ಹೊರೊಯ ಪ್ರಾಥಮಿಕ ಶಾಲೆ ಚಿತ್ಕ್ಕೆ ಅತ್ಯುತ್ತಮ ಮಕ್ಕಳ ಚಿತ್ರದ ರಾಷ್ಟ್ರ ಪ್ರಶಸ್ತಿ ಸಂದಾಯವಾಗಿದೆ. ಒಂದಲ್ಲ ಎರಡಲ್ಲ ಚಿತ್ರದಲ್ಲಿ ನಟಿಸಿದ್ದ ರೋಹಿತ್ ಅತ್ಯುತ್ತಮ ಬಾಲನಟ ಎನಿಸಿದ್ದಾನೆ.

ನಾತಿಚರಾಮಿ ಚಿತ್ರದ ಮಾಯಾವಿ ಮನವೆ ಹಾಡಿಗಾಗಿ ಬಿಂದು ರಮಣಿ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದರೇ, ಇದೇ ಚಿತ್ರದ ಸಂಕಲನ ಮತ್ತು ಸಾಹಿತ್ಯಕ್ಕೆ ಪ್ರಶಸ್ತಿ ಸಂದಾಯವಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...