fadnavis resigns ಫಡ್ನವಿಸ್ ರಾಜೀನಾಮೆ, ಮಹಾ ನಾಟಕಕ್ಕೆ ರಾಷ್ಟ್ರಪತಿ ಎಂಟ್ರಿ?

bjp declines
former maharaqshtfra cm devendra fadnavis

fadnavis resigns ಸರಕಾರ ರಚನೆಗೆ ಗಡುವು ಮುಗಿಯಲು ಕೆಲವೇ ಗಂಟೆ ಬಾಕಿ

ಮುಂಬೈ: ಸರಕಾರ ರಚನೆಗೆ ಶಿವಸೇನೆಯ ( fadnavis resigns ) ಮನವೊಲಿಸುವಲ್ಲಿ ವಿಫಲರಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ನಂತರ ಮಹಾರಾಷ್ಟ್ರ ಕಿರುವ ಅವಧಿಗಾದರೂ ರಾಷ್ಟ್ರಪತಿ ಆಡಳಿತಕ್ಕೆ ಒಳಪಡುವ ಸಾಧ್ಯತೆಗಳು ದಟ್ಟವಾಗಿವೆ.

ಇದನ್ನೂ ಓದಿ: ಸೋನಿಯಾ, ರಾಹುಲ್, ಪ್ರಿಯಾಂಕಾ ಎಸ್‍ಪಿಜಿ ಭದ್ರತೆ ರದ್ದು

ಚುನಾವಣಾ ಫಲಿತಾಂಶ ಬಂದು ಎರಡು ವಾರ ಕಳೆದರೂ ಬಿಜೆಪಿ ಮತ್ತು ಶಿವಸೇನೆ ಸರಕಾರ ರಚನೆ ವಿಚಾರದಲ್ಲಿ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿವೆ. ಸರಕಾರ ರಚನೆಗೆ ಗಡುವು ಶುಕ್ರವಾರ ಕೊನೆಗೊಳ್ಳುತ್ತದೆ. ಪವಾಡ ಆಗದಿದ್ದಲ್ಲಿ ರಾಷ್ಟ್ರಪತಿ ಶಾಸನ ಅನಿವಾರ್ಯ ಎನ್ನಲಾಗುತ್ತಿದೆ.

ರಾಜೀನಾಮೆ ನೀಡಿದ ನಂತರ ಮಾತನಾಡಿದ ದೇವೇಂದ್ರ ಫಡ್ನವಿಸ್ ಸರಕಾರ ರಚನೆಯ ವಿಚಾರದಲ್ಲಿ ಶಿವಸೇನೆಯ ನಿಲುವಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಮೈತ್ರಿ ಪಕ್ಷದೊಂದಿಗೆ ವ್ಯವಹಾರ ಮಾಡುವುದಕ್ಕಿಂತ ವಿರೋಧ ಪಕ್ಷಗಳ ಜೊತೆ ವ್ಯವಹರಿಸಲು ಶಿವಸೇನೆ ತೋರಿದ ಉತ್ಸಾಕ್ಕೆ ಬೇಸರಿಸಿದರು.

ಫಲಿತಾಂಶ ಸ್ಪಷ್ಟವಾಗಿ ಬಯಜೆಪಿ-ಶಿವಸೇನೆ ಮೈತ್ರಿ ಪರವಾಗಿದ್ದರೂ ಇಲ್ಲದ ಷರತ್ತುಗಳನ್ನು ಹಾಕುವ ಮೂಲಕ ಜನಾದೇಶವನ್ನು ಸೇನೆ ಅವಮಾನಿಸಿದೆ. ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಬಗ್ಗೆ ಯಾವುದೇ ಔಪಚಾರಿಕೆ ಮಾತುಕತೆ ಆಗಿರಲಿಲ್ಲ ಎಂದು ಫಡ್ನವಿಸ್ ಸ್ಪಷ್ಟಪಡಿಸಿದರು.

ಈ ಮಧ್ಯೆ ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಅವರು ಶುಕ್ರವಾರ ಎನ್‌ಸಿಪಿ ನಾಯಕ ಶರದ್ ಪವಾರ್‍ ಅವರ ಸಂಗಡ ಸುದೀರ್ಘ ಚರ್ಚೆ ನಡೆಸಿದ್ದು ರಾಜಕೀಯ ವಲಯಗಳಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಈ ಭೇಟಿಗೆ ಮುನ್ನ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸಹ ಪವಾರರನ್ನು ಕಂಡು ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...