fadnavis ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಪಮತದ ಸರಕಾರ

fadnavis
care taker cm fadnavis

fadnavis ಸರಕಾರ ರಚನೆಗೆ ಬಿಜೆಪಿಗೆ ರಾಜ್ಯಪಾಲರ ಆಹ್ವಾನ

ಮುಂಬೈ: ತಡವಾಗಿಯಾದರೂ ನಿರೀಕ್ಷೆಯಂತೆಯೇ ( fadnavis ) ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ: ಫಡ್ನವಿಸ್ ರಾಜೀನಾಮೆ, ಮಹಾ ನಾಟಕಕ್ಕೆ ರಾಷ್ಟ್ರಪತಿ ಎಂಟ್ರಿ?

ಬಿಜೆಪಿ-ಶಿವಸೇನೆ ಮೈತ್ರಿಗೆ ಸ್ಪಷ್ಟ ಜನಾದೇಶವಿದ್ದರೂ ಅಧಿಕಾರ ಹಂಚಿಕೆಯ ವಿಷಯದಲ್ಲಿ ಶಿವಸೇನೆ ತಳೆದ ಹಠಮಾರಿ ನಿಲುವಿನಿಂದಾಗಿ ಫಲಿತಾಂಶ ಬಂದು ಎರಡು ವಾರ ಕಳೆದರೂ ಮಹಾರಾಷ್ಟ್ರದಲ್ಲಿ ಈವರೆಗೆ ಸರಕಾರ ರಚನೆ ಸಾಧ್ಯವಾಗಿರಲಿಲ್ಲ. ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದರೇ ಶಿವಸೇಣೆ 56 ಸ್ಥಾನ ಗೆದ್ದುಕೊಂಡಿದೆ.

ಮುಖ್ಯಮಂತ್ರಿ ಹುದ್ದೆಯನ್ನು ಸಮಾಣ ಅವಧಿಗೆ ಹಂಚಿಕೊಳ್ಳಬೇಕು ಎಂದು ಶಿವಸೇನೆ ಮುಖ್ಯಸ್ಥ ುದ್ಧವ್ ಠಾಕ್ರೆ ಅವರು ಬಿಜೆಪಿ ಮುಂದೆ ಷರತ್ತು ಇಟ್ಟ ಕಾರಣ ಸರಕಾರ ರಚನೆ ದಾರಿ ದುರ್ಗಮವಾಯಿತು.

ಶಿವಸೇನೆಯೊಂದಿಗೆ ಸರಕಾರ ರಚನೆ ಅಸಾಧ್ಯ ಎಂಬ ನಿಲುವಿಗೆ ಬಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶುಕ್ರವಾರ ರಾಜೀನಾಮೆ ನೀಡಿದ್ದರು. ಈಗ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರಕಾರ ರಚನೆಗೆ ರಾಝ್ಯಪಾಲರು ಮೊದಲ ವೀಳ್ಯ ನೀಡಿದ್ದು, ಕಮಲ ಪಕ್ಷ ಻ದನ್ನು ಸ್ವೀಕರಿಸುವ ಸಾಧ್ಯತೆ ದಟ್ವಾಗಿದೆ.

ಅಲ್ಪಮತದ ಸರಕಾರ ರಚಿಸಿ ಪಕ್ಷೇತರರನ್ನು ತನ್ನತ್ತ ಸೆಳೆದುಕೊಂಡು ಬೆಂಬಲ ನೀಡುವುದು ಅನಿವಾರ್ಯ ಎಂಬ ಪರಿಸ್ಥಿತಿಯನ್ನು ಶೀವಸೇನೆಗೆ ನಿರ್ಮಾಣ ಮಾಡುವುದು ಬಿಜೆಪಿಯ ಲೆಕ್ಕಾಚಾರ ಎನ್ನಲಾಗಿದೆ.