factors ಮತದಾನದ ಮೇಲೆ ಪ್ರಭಾವ ಬೀರಲಿದೆಯೇ ಈ 3 ಅಂಶ?

factors
karnataka redying for bypolls

factors ಗುರುವಾರ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ, ರಾಜಕೀಯ ಪಕ್ಷಗಳಿಗೆ ಹೆಚ್ಚಿದ ತವಕ

ಬೆಂಗಳೂರು: ರಾಜ್ಯ ರಾಜಕೀಯದ ದಿಕ್ಕನ್ನು ಬದಲಿಸಬಲ್ಲ ( factors ) ಉಪ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಗುರುವಾರ ಮತದಾನ ನಡೆಯಲಿದೆ. ಈ ಹಂತದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತ ಜೆಡಿಎಸ್‌ ಅಭ್ಯರ್ಥಿಗಳಲ್ಲಿ ತವಕ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಅನರ್ಹರಿಗೆ ಬಿಜೆಪಿ ಕಾರ್‍ಯಕರ್ತರ ಒಳೇಟಿನದ್ದೇ ಚಿಂತೆ

ಯಾವುದೇ ನಿರ್ದಿಷ್ಟ ವಿಷಯಗಳಿಲ್ಲದೇ ನಡೆಯುತ್ತಿರುವ ಚುನಾವಣೆ ಇದಾಗಿದ್ದು, ಕೇವಲ ಒಂದು ವರ್ಷದ ಅವಧಿಯಲ್ಲಿ 15 ಕ್ಷೇತ್ರಗಳ ಮತದಾರರು ಎರಡನೇ ಬಾರಿಗೆ ತಮ್ಮ ಪ್ರತಿನಿದಿಯನ್ನು ಆಯ್ಕೆ ಮಾಡಬೇಕಾದ ಅನಿವಾರ್‍ಯತೆಯಲ್ಲಿದ್ದಾರೆ.

ಹಾಗಾದರೆ ಈ ಚುನಾವಣೆಯಲ್ಲಿ ಮತದಾರ ಏನು ನೋಡಿ ಮತ ಹಾಕಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಕಳೆದ ಹದಿನೈದು ದಿನಗಳ ಪ್ರಚಾರದ ಭರಾಟೆ ನಂತರ ಕ್ಷೇತ್ರಗಳಲ್ಲಿ ಮೂರು ಪ್ರಮುಖ ಅಂಶಗಳು ಕಂಡುಬಂದಿದ್ದು, ಇವು ಮತದಾನದ ಮೇಲೆ ಪ್ರಭಾವ ಬಿರುವ ಸಾಧ್ಯತೆ ಇದೆ. ಆ ಮೂರು ಪ್ರಮುಖ ಅಂಶಗಳು ಹೀಗಿವೆ…

1. ಪಕ್ಷಾಂತರ ಮಟ್ಟ ಹಾಕುವುದು: ಈ ಚುನಾವಣೆಗೆ ಮುಖ್ಯ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರ ರಾಜೀನಾಮೆ, ಅನರ್ಹತೆ ಹಾಗೂ ಬಿಜೆಪಿಗೆ ಅವರು ಪಕ್ಷಾಂತರ. ಅನರ್ಹಗೊಂಡಿರುವ ಶಾಸಕರು ರಾಜೀನಾಮೆ ನೀಡುವ ಮುನ್ನ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಕಾರಣ ಅವರಿಗೆ ಪಾಠ ಕಲಿಸುವ ತವಕ.

2. ಸ್ಥಿರ ಸರಕಾರದ ಸ್ಥಾಪನೆ: ಇವರೋ, ಅವರೋ, ಇನ್ಯಾರೋ, ಒಟ್ಟಿನಲ್ಲಿ ರಾಜ್ಯದಲ್ಲಿ ಐದು ವರ್ಷ ಕಾಲ ಆಡಳಿತ ನಡೆಸಬಹುದಾದ ಒಂದು ಸ್ಥಿರ ಸರಕಾರ ಇರಬೇಕು. ಮೈತ್ರಿ ಸರಕಾರ ಬಿದ್ದಾಗಿದೆ. ಈಗಿರುವ ಸರಕಾರವಾದರೂ ಬಾಳ್ವೆ ಮಾಡಲಿ ಎಂಬ ಬಯಕೆ.

3. ಅಭಿವೃದ್ಧಿಯ ಮಹದಾಸೆ: ಮತದಾರರಿಗೆ ಅಂತಿಮವಾಗಿ ಬೇಕಿರುವುದು ತಮ್ಮ ಕ್ಷೇತ್ರದ ಅಭಿವೃದ್ಧಿ, ಅನರ್ಹರ ಕ್ರಮದಿಂದ ಕ್ಷೇತ್ರಕ್ಕೆ ಅನುದಾನ ಹರಿದುಬಂದು ಅಭಿವೃದ್ಧಿಯಾಗುವುದಾದರೆ ಯಾಕೆ ಬೇಡೆನ್ನಬೇಕು ಎಂಬ ಭಾವನೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...