ed summons ಡಿಕೆಶಿ ತಾಯಿ, ಪತ್ನಿಗೆ ಸದ್ಯಕ್ಕೆ ನಿರಾಳ

ed summons
dk shivakumar and his mother (file photo)

ed summons ಇಡಿ ವಿಚಾರಣೆಯಿಂದ 5 ದಿನ ವಿನಾಯಿತಿ

ಹೊಸದಿಲ್ಲಿ: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ( ed summons ) ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರ ತಾಯಿ ಮತ್ತು ಪತ್ನಿಯನ್ನು ವಿಚಾರಣೆಗೆ ಒಳಪಡಿಸುವ ಜಾರಿ ನಿರ್ದೇಶನಾಲಯದ ಕ್ರಮಕ್ಕೆ ನ್ಯಾಯಾಲಯ ಸದ್ಯಕ್ಕೆ ಬ್ರೇಕ್ ಹಾಕಿದೆ.

ಇದನ್ನೂ ಓದಿ: ಡಿಕೆಶಿಗೆ ಸದ್ಯ ಜಾಮೀನಿಲ್ಲ, 17ರವರೆಗೆ ತಿಹಾರ ಜೈಲೇ ಗಟ್ಟಿ

ಇಡಿ ವಿಚಾರಣೆಯಿಂದ ವಿನಾಯಿತಿ ಕೋರಿ ಇವರಿಬ್ಬರೂ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದಿಲ್ಲಿ ಹೈಕೋರ್ಟು ಇದೇ 21ಕ್ಕೆ ನಿಗದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿಂದೆ ನಿಡಿದ್ದ ಸಮನ್ಸ್ ಹಿಂಪಡೆದು ಹೊಸದಾಗಿ ಸಮನ್ಸ್ ಜಾರಿ ಮಾಡುವುದಾಗಿ ತನಿಖಾಧಿಕಾರಿಗಳು ಕೋರ್ಟಿಗೆ ತಿಳಿಸಿದ್ದಾರೆ.

ಶಿವಕುಮಾರ್‍ ಅವರ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೋಮವಾರ ತನಿಖಾಧಿಕಾರಿಗಳು ಇವರಿಬ್ಬರಿಗೂ ಸಮನ್ಸ್ ಜಾರಿ ಮಾಡಿದ್ದರು.

ಡಿಕೆ ಶಿವಕುಮಾರ್‍ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಪರಿಶೀಲನೆಯ ವ್ಯಾಪ್ತಿಯನ್ನು ಹಿಗ್ಗಿಸಿರುವ ತನಿಖಾಧಿಕಾರಿಗಳು 51 ಮಂದಿಗೆ ಸಮನ್ಸ್ ಜರಿ ಮಾಡಿತ್ತು. ಇದರಲ್ಲಿ ಡಿಕಶಿ ಅವರ ಪತ್ನಿ ಹಾಗೂ ತಾಯಿಯವರೂ ಸೇರಿದ್ದರು.

ಈ ಮಧ್ಯೆ ಕಳೆದೆರಡು ತಿಂಗಳಿಂದ ಇಡಿ ವಶ ಮತ್ತು ಬಂಧನಕ್ಕೊಳಗಾಗಿರುವ ತಮಗೆ ಜಾಮೀನು ನೀಡುವಂತೆ ಡಿಕೆ ಶಿವಕುಮಾರ್‍ ಅಲ್ಲಿಸಿದ್ದ ಅರ್ಜಿ ಸಂಬಂಧ ದಿಲ್ಲಿ ಹೈಕೋರ್ಟು ಗುರುವಾರ ಮಧ್ಯಾಹನ್ ತನ್ನ ತೀರ್ಮಾನ ಪ್ರಕಟಿಸಲಿದೆ. ಇಡಿ ನ್ಯಾಯಾಲಯ ಡಿಕೆಶಿ ನ್ಯಾಯಾಂಗ ಬಂಧನವನ್ನು 25ರವರೆಗೆ ವಿಸ್ತರಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...