economic slowdown ಈ ಆರ್ಥಿಕ ಕುಸಿತ ಅಸಹನೀಯ: ಮನಮೋಹನ್ ಕಳವಳ

economic slowdown
former prime minister manmohan singh

economic slowdown ಶೇ 4.5ಕ್ಕೆ ಕುಸಿದ GDP, ಆರು ವರ್ಷದ ಹಿನ್ನಡೆ

ಹೊಸದಿಲ್ಲಿ: ದೇಶದ ಸದ್ಯದ ಆರ್ಥಿಕ ಕುಸಿತ ಅಸಹನೀಯ ಮತ್ತು ( economic slowdown ) ಪ್ರಗತಿಗೆ ಘಾತಕ ಎಂದು ವಿತ್ತ ಪಂಡಿತ ಹಾಗೂ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭಾರೀ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿಗೆ ಮೂಗುದಾರ ಹಾಕಿದ ಮಮತಾ

ರಿಸರ್ವ ಬ್ಯಾಂಕಿನ ತಾಜಾ ವರದಿ ದೇಶದ ಆರ್ಥಿಕ ಪ್ರಗತಿ ದರ ಶೇ.4.5 ರ ಮಟ್ಟಕ್ಕೆ ಕುಸಿದಿರುವುದಾಗಿ ಹೇಳಿದ್ದು ಇದು ಆರು ವರ್ಷದ ಹಿಂದಿನ ಮಟ್ಟ ತಲುಪಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ತನ್ನ ನೀತಿಗಳನ್ನು ಬದಲಿಸಿಕೊಳ್ಳಬೇಕು ಎಂದದಿದ್ದಾರೆ.

ಯಾವುದೇ ಅರ್ಥಿಕತೆ ಸದೃಢಗೊಳ್ಳಲು ಸಮಾಜದಲ್ಲಿ ಪರಸ್ಪರ ವಿಶ್ವಾಸ, ಅನ್ಯೋನ್ಯತೆ ಅತ್ಯಗತ್ಯ. ಪ್ರಸಕ್ತ ಕೇಂದ್ರ ಸರಕಾರ ತನ್ನ ವಿಭಜಕ ನೀತಿಗಳಿಂದ ಸಮಾಗದಲ್ಲಿನ ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಇದರಿಂದಾಗಿ ಆರ್ತೀಕತೆಯೂ ಕುಸಿದಿದೆ.

ಸರಕಾರ ಈಗಲಾದರೂ ತನ್ನ ತಪ್ಪನ್ನು ತಿದ್ದಿಕೊಂಡು ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವ ನೀತಿ ಅನುಸರಿಸುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಷ್ಟೇ ಅಲ್ಲ ಅದನ್ನು ಅತ್ಯಂತ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಮನಮೋಹನ್ ಸಿಂಗ್ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...