ಈರುಳ್ಳಿ ಪ್ರತೀ ದಿನ ತಿಂದು ಸಕ್ಕರೆ ಖಾಯಿಲೆಯಿಂದ ದೂರವಿರಿ

ವ್ಯಾಯಾಮ ಜೊತೆಗೆ ಈರುಳ್ಳಿ ತಿಂದು ತೂಕ ಕಡಿಮೆ ಮಾಡಿ

ಇತ್ತೀಚಿನ ಸಂಶೋಧನೆಯೊಂದು ಮಧುಮೇಹ ಮತ್ತು ಕೊಬ್ಬನ್ನು ಇಳಿಸುವಲ್ಲಿ ಈರುಳ್ಳಿ ಸಹಕಾರಿ ಎಂಬ ಅಂಶವನ್ನು ಹೊರಹಾಕಿದೆ. ನಿಯಮಿತವಾಗಿ ಈರುಳ್ಳಿ ಸೇವಿಸುವುದರಿಂದ ರಕ್ತದಲ್ಲಿನ ಮಧುಮೇಹದ ಪ್ರಮಾಣ ಸಹಜ ಹಂತಕ್ಕೆ ತಲುಪುತ್ತದೆ. ಇದರಲ್ಲಿರುವ ಪ್ರತಿ ಜೈವಿಕ, ನಂಜುವಿರೋಧಿ ಗುಣವು ದೇಹವನ್ನು ಯಾವುದೇ ರೀತಿಯ ಅಲರ್ಜಿ ಸಮಸ್ಯೆಯಿಂದ ಬಳಲದಂತೆ ಕಾಪಾಡುತ್ತದೆ.

ಈರುಳ್ಳಿಯಲ್ಲಿ ದೇಹಕ್ಕೆ ಉತ್ತಮ ಪೋಷಣೆ ಒದಗಿಸಬಲ್ಲ ವಿಟಮಿನ್ ಗಳು ಹೇರಳವಾಗಿದ್ದು, ಇದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಕಾರಿಯಾಗಿದೆ. ಆರೋಗ್ಯ ವೃದ್ಧಿಗೆ ಸಿದ್ಧೌಷಧವಾಗಿರುವ ಈ ಈರುಳ್ಳಿಯನ್ನು ಪ್ರತೀ ನಿತ್ಯ ಸೇವಿಸುತ್ತಾ ಬಂದರೆ ಹದಗೆಟ್ಟ ಆರೋಗ್ಯವೂ ಸುಧಾರಿಸುತ್ತದೆ.

ಸಕ್ಕರೆ ಖಾಯಿಲೆಯಿಂದ ದೂರವಿರಬಹುದು

ಈರುಳ್ಳಿಯನ್ನು ನಿಯಮಿತವಾಗಿ ಈರುಳ್ಳಿ ಸೇವಿಸುವುದರಿಂದ ತಿನ್ನುವುದರಿಂದ ಇದು ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್‌ನ್ನು ಕಡಿಮೆ ಮಾಡಿ, ಇನ್ಸುಲಿನ್‌ನ್ನು ಹೆಚ್ಚಾಗುವಂತೆ ಮಾಡುತ್ತದೆ. ರಕ್ತದಲ್ಲಿನ ಮಧುಮೇಹದ ಪ್ರಮಾಣ ಸಹಜ ಹಂತಕ್ಕೆ ತಲುಪುತ್ತದೆ. ಇದರಿಂದ ನಾವು ಸಕ್ಕರೆ ಖಾಯಿಲೆಯಿಂದ ದೂರವಿರಬಹುದು.

ದೇಹ ತೂಕ ಕಡಿಮೆ ಮಾಡುತ್ತದೆ

ದಢೂತಿ ದೇಹ ಕರಗಿಸುವಲ್ಲಿಯೂ ಈರುಳ್ಳಿ ಸಹಕಾರಿಯಾಗುತ್ತದೆ. ಡಯಟ್ ಮತ್ತು ವ್ಯಾಯಾಮ ಮಾಡುವವರಿಗೆ ಕೊಬ್ಬನ್ನ ಕರಗಿಸಲು ಅನುಕೂಲಕರವಾಗಿದೆ. ಇದಕ್ಕೆ ಸ್ಪ್ರಿಂಗ್ ಆನಿಯನ್ ಹೆಚ್ಚು ಪರಿಣಾಮಕಾರಿಯಂತೆ.

ದಂತ ಕ್ಷಯದಿಂದ ರಕ್ಷಣೆ

ಈರುಳ್ಳಿಯನ್ನು ಪ್ರತೀನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ. ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಇದು ಹಲ್ಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಪ್ರತೀ ನಿತ್ಯ 3 ನಿಮಿಷಕ್ಕಿಂತ ಹೆಚ್ಚಾಗಿ ಈರುಳ್ಳಿಯನ್ನು ಜಗಿಯುವುದರಿಂದ ಇದು ಹಲ್ಲಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ನಿದ್ರೆ ಚೆನ್ನಾಗಿ ಬರುತ್ತದೆ

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಈರುಳ್ಳಿ ಒಳ್ಳೆಯ ಔಷಧಿ. ರಾತ್ರಿ ಊಟಕ್ಕೂ ಮುನ್ನ ಈರುಳ್ಳಿ ಸೂಪ್ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

ಲೈಂಗಿಕ ದೌರ್ಬಲ್ಯ ದೂರಗೊಳಿಸಿ

ಈರುಳ್ಳಿ ಕೇವಲ ಆಹಾರ – ಪದಾರ್ಥಗಳನ್ನು ಸ್ವಾಧಿಷ್ಟವಾಗಿಸುವುದು ಮಾತ್ರವಲ್ಲ ಇದು ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಉಪಯೋಗಿಸಿ ಸೆಕ್ಸ್‌ ಲೈಫ್‌ ಉತ್ತಮವಾಗಿರುವಂತೆ ಮಾಡಿ.

ಬಿಳಿ ಈರುಳ್ಳಿ ಹೆಚ್ಚಿ ಜಜ್ಜಿ ತುಪ್ಪದಲ್ಲಿ ಹುರಿಯಿರಿ. ಒಂದು ಹನಿ ಜೇನುತುಪ್ಪದ ಜತೆಗೆ ಪ್ತಿದನ ಒಂದು ಸ್ಪೋನ್‌ ಸೇವಿಸುತ್ತಾ ಬನ್ನಿ. ಆದರೆ ಇದರ ಸೇವನೆಗಿಂತ ಮೊದಲು ಕನಿಷ್ಠ ಎರಡು ಗಂಟೆ ನೀವು ಖಾಲಿ ಹೊಟ್ಟೆಯಲ್ಲಿ ಇರಬೇಕು. ಇದರ ಸೇವನೆ ನಿದ್ದೇ ವೇಳೆ ಸೇರಿದಂತೆ ಅಕಾಲಿಕ ಸ್ಖಲನವನ್ನು ದೂರಗೊಳಿಸುತ್ತದೆ.

ಈರುಳ್ಳಿ ಜ್ಯೂಸ್‌ ಜತೆ ಉದ್ದು ಕಾಳಿನ ಪೌಡರ್‌ ಬೆರಸಿ ಏಳು ಇರಿಸಿ ಬಳಿಕ ಒಣಗಲು ಬಿಡಿ, ಈ ಮೀಶ್ರಣವನ್ನು ದಿನಕ್ಕೊಮ್ಮೆ ಒಂದು ತಿಂಗಳು ತಿನ್ನುತ್ತಾ ಬನ್ನಿ. ಇದು ನಿಮ್ಮ ಸೆಕ್ಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಅಸ್ತಮಾದಿಂದ ನಿವಾರಣೆಗೆ ಸಹಕಾರಿ

ಈರುಳ್ಳಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೆಚ್ಚಾಗಿದ್ದು, ಇದು ಹಿಸ್ಟಮೀನ್ ನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಬರುವ ಅಲರ್ಜಿ ಹಾಗೂ ಅಸ್ತಮಾ ರೋಗಗಳಿಂದ ದೂರವಿಡುತ್ತದೆ. ಈರುಳ್ಳಿರಸಕ್ಕೆ ಜೇನುತುಪ್ಪ ಸೇರಿಸಿ ಸಮಪ್ರಮಾಣದಲ್ಲಿ ಸೇವಿಸುವುದರಿಂದ ಅಸ್ತಮಾದಿಂದ ದೂರವಿರಬಹುದು.

ಕೂದಲಿಗೆ ಉಪಯೋಗ

ಈರುಳ್ಳಿ ದೇಹದ ಆರೋಗ್ಯವಷ್ಟೇ ಅಲ್ಲದೆ, ಸೌಂದರ್ಯ ವೃದ್ಧಿಗೂ ಸಹಕಾರಿಯಾಗಿದ್ದು, ಕೂದಲಿನ ಆರೈಕೆಗೆ ಉತ್ತಮ ಔಷಧವೆನ್ನಬಹುದು. ಈರುಳ್ಳಿಯಲ್ಲಿ ವಿಟಮಿನ್ ಎ ಹಾಗೂ ಸಿ ಇರುವುದರಿಂದ ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕೂದಲಿನ ಬುಡವನ್ನು ಗಟ್ಟಿಯಾಗಿಸುತ್ತದೆ. ಈರುಳ್ಳಿಯ ರಸವನ್ನು ಕೂದಲಿನ ಬುಡಕ್ಕೆ ಹಚ್ಚುತ್ತಾ ಬಂದರೆ ಕೂದಲು ಉದುರುವುದು ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ರಕ್ತ ಸಂಚಲನ ಸುಗಮವಾಗುತ್ತದೆ.

ಚರ್ಮಕ್ಕೆ ಒಳ್ಳೆಯದು

ಮುಖದ ಮೇಲೆ ಪಿಂಪಲ್ಸ್ ಹೋಗಬೇಕು ಎಂದರೆ ಈರುಳ್ಳಿ ಚೂರುಗಳನ್ನು ಸ್ವಲ್ಪ ನೀರಿನಿಂದ ನೆನಸಿ ಅದನ್ನು ಪಿಂಪಲ್ಸ್ ಮೇಲೆ ಹಚ್ಚಿಕೊಂಡರೆ ಸರಿಹೋಗುತ್ತದೆ. ಜೇನು ಹುಳ ಕಚ್ಚಿದರೆ ಈರುಳ್ಳಿಯಿಂದ ಉಜ್ಜಿದರೆ ಆ ನೋವು ಕಡಿಮೆ ಆಗುತ್ತದೆ.

ಇತರೆ ಉಪಯೋಗಗಳು

  • ತುಕ್ಕು ಹಿಡಿದ ಚಾಕುನಿಂದ ಈರುಳ್ಳಿಯಿಂದ ಉಜ್ಜಿದರೆ ಬಿಳಿಯಾಗುತ್ತದೆ.
  • ಹೊಸದಾಗಿ ಪೈಂಟ್ ಮಾಡಿದ ರೂಮಿನಲ್ಲಿ ಆ ವಾಸನೆ ಹೋಗುವುದಕ್ಕೆ ಈರುಳ್ಳಿ ರೂಮ್ ಫ್ರೆಷೆರ್ ಹಾಗೆ ಕೆಲಸ ಮಾಡುತ್ತದೆ.
  • ನೀರು ಇರುವ ಒಂದು ಪಾತ್ರೆಯಲ್ಲಿ ತಾಜಾ ಈರುಳ್ಳಿಯನ್ನು ಇಟ್ಟು ಆ ಪಾತ್ರೆಯನ್ನು ಆ ರೂಮಿನಲ್ಲಿ ಒಂದು ರಾತ್ರಿ ಪೂರ್ತಿ ಇಟ್ಟರೆ ಸಾಕು ಅದು ರೂಮ್ ಫ್ರೆಷೆರ್ ಹಾಗೆ ಕೆಲಸ ಮಾಡುತ್ತದೆ.
ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...