ಬಾಳೆಹಣ್ಣಿನ ಆಶ್ಚರ್ಯಪಡಿಸುವ ಪ್ರಯೋಜನಗಳು

ನಿಮಗೆ ಗೊತ್ತೇ ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇವಿಸುವ ಹಣ್ಣು ಯಾವುದು ಎಂದು? ಅಧ್ಯಯನದ ಪ್ರಕಾರ ಜಗತ್ತಿನಲ್ಲಿ ಬಾಳೆಹಣ್ಣನ್ನು ಹೆಚ್ಚು ಜನರು ಸೇವಿಸುವರು. ಏಕೆಂದರೆ ಬಾಳೆಹಣ್ಣು ರುಚಿಕರ, ಸಿಹಿ ಮತ್ತು ಆರೋಗ್ಯಕರ. ಆರೋಗ್ಯಕ್ಕೆ ಅವಶ್ಯವಿರುವ ಎಲ್ಲಾ ಪೌಷ್ಟಿಕಾಂಶಗಳು ವಿಟಮಿನ್ ಗಳು ಬಾಳೆಹಣ್ಣಿನಲ್ಲಿ ಇರುವುದರಿಂದ ದಿನಕ್ಕೆ ಒಂದು ಹಣ್ಣನ್ನು ಸೇವಿಸುವುದು ಒಳ್ಳೆಯದು.

ನನಗೆ ಡಯಾಬಿಟೀಸ್ ಇದೆ ನಾನು ಬಾಳೆಹಣ್ಣನ್ನು ಸೇವಿಸಬಹುದೇ?

ಇದು ಸಾಮಾನ್ಯವಾಗಿ ಕಾಡುವ ಪ್ರಶ್ನೆ, ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ನೀರು ಇರುವುದರಿಂದ ಇದನ್ನು ಸೇವಿಸಬಹುದು, ಆದರೆ ಕಡಿಮೆ ಹಣ್ಣಾಗಿರುವ ಬಾಳೆಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಜೀರ್ಣ ಕ್ರಿಯೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.

ಬಾಳೆಹಣ್ಣು 51 ಅಂಕವನ್ನು ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಪಡೆಯುತ್ತದೆ. ಆದ್ದರಿಂದ ಇದನ್ನು ಬ್ಲಡ್ ಶುಗರ್ ಇರುವವರು ಸೇವಿಸಬಹುದು, ಆದರೆ ದಿನಕ್ಕೆ ಒಂದು ಅಥವಾ ಎರಡು ಹಣ್ಣು ಮಾತ್ರ ಒಳ್ಳೆಯದು. 55ಕ್ಕಿಂತ ಕಡಿಮೆ ಅಂಕ ಪಡೆಯುವುದನ್ನು ಕಡಿಮೆ ಸಕ್ಕರೆ ಅಂಶ ಇರುವುದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ನೀರು ಮತ್ತು ಕಾರ್ಬೋಹೈಡ್ರೇಟ್ ಇರುವುದರಿಂದ ದಿನಕ್ಕೆ ಒಂದು ಹಣ್ಣನ್ನು ಸೇವಿಸುವುದು ಒಳ್ಳೆಯದು.

ತೂಕ ಕಳೆದುಕೊಳ್ಳುವಲ್ಲಿ ಬಾಳೆಹಣ್ಣು ಸಹಾಯ ಮಾಡುತ್ತದೆ

ಬಾಳೆಹಣ್ಣಿನಲ್ಲಿ 105 ಕ್ಯಾಲೋರಿಗಳಿವೆ ಹಾಗೆಯೇ ಇದರಲ್ಲಿ ಫೈಬರ್ ಅಥವಾ ನಾರು ಇದೆ. ಮತ್ತು ಪ್ರೊಟೀನ್ ಮತ್ತು ಕೊಬ್ಬಿನಂಶಗಳು ಇದರಲ್ಲಿ ಕಡಿಮೆ ಇವೆ.

ಒಂದು ಬಾಳೆಹಣ್ಣಿನಲ್ಲಿ 12% ನಷ್ಟು ಫೈಬರ್ ಇದೆ. ಇಷ್ಟು ಫೈಬರ್ ಅನ್ನು ಪ್ರತಿದಿನ ಸೇವಿಸಲು ಶಿಫಾರಸ್ಸು ಮಾಡಲಾಗುವುದು. ದಿನಕ್ಕೆ ಮಹಿಳೆಗೆ 28 ಗ್ರಾಂನಷ್ಟು ಮತ್ತು ಪುರುಷರಿಗೆ 38 ಗ್ರಾಂ ನಷ್ಟು ಫೈಬರ್ ನ ಅಗತ್ಯವಿದೆ ಆದ್ದರಿಂದ ಇದು ಒಳ್ಳೆಯ ಆಹಾರ.

ಮಲಬದ್ಧತೆ ಮತ್ತು ಕರುಳಿನ ಕೆಲಸ ಸರಾಗವಾಗಿ ಆಗಲು ಇದು ಸೂಕ್ತ ಅಥವಾ ಸರಿಯಾದ ಹಣ್ಣು. ಅಧ್ಯಯನಗಳ ಪ್ರಕಾರ ಫೈಬರ್ ಅನ್ನು ಸೇವಿಸುವವರು ತೂಕವನ್ನು ಕಳೆದುಕೊಳ್ಳುವರು.

ಹೃದಯಕ್ಕೆ ಆರೋಗ್ಯಕರ

ಅದು ಹೇಗೆ ಬಾಳೆಹಣ್ಣು ನನ್ನ ಹೃದಯದ ಆರೋಗ್ಯವನ್ನು ಕಾಪಾಡುವುದು? ಪೊಟ್ಯಾಷಿಯಂ ಹೃದಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗು ಗೊತ್ತು, ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಇದೆಯೇ? ಹೌದು ಇದರಲ್ಲಿ ಪೊಟ್ಯಾಷಿಯಂ ಇದೆ. ಇದರಲ್ಲಿ 422mg ನಷ್ಟು ಪೊಟ್ಯಾಷಿಯಂ ಇದೆ ಅಥವಾ ಪ್ರತಿದಿನಕ್ಕೆ ಸೇವಿಸಬೇಕಾದ ಪೊಟ್ಯಾಷಿಯಂ ಅಂಶದಲ್ಲಿ ಶೇಕಡಾ ೧೨ರಷ್ಟು ಇದರಲ್ಲಿದೆ. ನಿಮ್ಮ ದೇಹದಲ್ಲಿ ಸಾಮಾನ್ಯ ಚಟುವಟಿಕೆಗಳು ನಡೆಯಲು ಅಗತ್ಯವಿರುವ ಸ್ನಾಯು ಮತ್ತು ಹೃದಯವನ್ನು ಇದು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದಲ್ಲಿ ಪೊಟ್ಯಾಷಿಯಂ ಇರುವುದರಿಂದ ಇದು ನಮ್ಮ ಕಿಡ್ನಿಗೂ ಕೂಡ ಒಳ್ಳೆಯದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...