dwarkish ನನಗೇನೂ ಆಗಿಲ್ಲ, ಆರಾಮಿದ್ದೀನಿ: ದ್ವಾರಕೀಶ್

dwarkish
veteran actor dwarkish

dwarkish ಆರೋಗ್ಯದ ಕುರಿತ ವದಂತಿಗಳಿಗೆ ದ್ವಾರಕೀಶ್ ಸ್ಪಷ್ಟನೆ

ಬೆಂಗಳೂರು: ತಾವು ಆರಾಮವಾಗಿದ್ದು ತಮ್ಮ ಆರೋಗ್ಯದ ಕುರಿತಾದ ( dwarkish ) ವದಂತಿಗಳಿಗೆ ಯಾರೂ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ಕನ್ನಡದ ಹೆಸರಾಂತ ನಟ ದ್ವಾರಕೀಶ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರುಸ್ತುಂ ಶಿವಣ್ಣ ಹುಟ್ಟುಹಬ್ಬ, ಅಭಿಮಾನಿಗಳ ಪುಳಕ

ಬೆಳಗ್ಗೆಯಿಂದ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡಿ ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು.

ಈ ಹಿನ್ನೆಲೆಯಲ್ಲಿ ಖುದ್ದು ಮಾತನಾಡಿರುವ ದ್ವಾರಕೀಶ್ ಅವರ ತಾವು ಆರೋಗ್ಯದಿಂದಿದ್ದು ಯಾವುದೇ ತೊಂದರೆ ಇಲ್ಲ. ಈ ವಿಚಾರವಾಗಿ ಯಾರೂ ಗಾಬರಿಯಾಗಬೇಕಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಮುನ್ನ ನಿರ್ದೇಶಕ ಕೆಎಂ ಚೈತನ್ಯ ಸಹ ಟ್ವಿಟರ್ ಮೂಲಕ ಕನ್ನಟದ ಕುಳ್ಳ ದ್ವಾರಕೀಶ್ ಅವರ ಕುರಿತಾದ ವದಂತಿಗಳನ್ನು ಅಲ್ಲಗಳೆದಿದ್ದರು.

ದ್ವಾರಕೀಶ್ ಸರ್ ಆರೋಗ್ಯವಾಗಿದ್ದಾರೆ. ಅವರಿಗೆ ಏನು ಆಗಿಲ್ಲ. ಗಾಳಿ ಸುದ್ಧಿಗಳಿಗೆ ಕಿವಿಗೊಡಬೇಡಿ ಎಂದು ಚೈತನ್ಯ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ಅಭಿಮಾನಿಗಳನ್ನು ಕೋರಿದ್ದರು.

ಕನ್ನಡ ಚಿತ್ರರಂಗ ಕಂಡ ಧೀಮಂತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಆರೋಗ್ಯ ವಿಷಮಿಸಿದೆ ಎಂಬ ವರದಿಗಳು ಮಂಗಳವಾರ ವ್ಯಾಪಕವಾಗಿ ಹರಿದಾಡಿತ್ತು. ಹೀಗಾಗಿ ಚೈತನ್ಯ ಹಾಗೂ ಖುದ್ದು ದ್ವಾರಕೀಶ್ ಅವರೇ ಸ್ಪಷ್ಟೀಕರಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...