dutt ಯಶ್ ಕೆಜಿಎಫ್-2 ಚಿತ್ರದಲ್ಲಿ ನಟಿಸಲು ಹೆಮ್ಮೆಯಾಗುತ್ತಿದೆ: ಸಂಜಯ್ ದತ್

dutt
sanjay dutt

dutt ಕೆಜಿಎಫ್ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ ಸಂಜಯ್ ದತ್

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್‍ 2 ಚಿತ್ರದಲ್ಲಿ ಅತ್ಯಂತ ( dutt ) ಪ್ರಮುಖ ಎಂದೇ ಬಿಂಬಿತವಾಗಿರುವ ಅಧೀರನ ಪಾತ್ರವನ್ನು ಬಾಲಿವುಡ್ ನಟ ಸಂಜಯ್ ದತ್ ನಿರ್ವಹಿಸಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಇದನ್ನೂ ಓದಿ: ಯಶ್ ಕೆಜಿಎಫ್-2ನಲ್ಲಿ ಅಧೀರನಾಗಿ ಸಂಜಯ್ ದತ್?

ಇದೇ ವೇಳೆ ಕೆಜಿಎಫ್‌ನಂತಹ ಚಿತ್ರದಲ್ಲಿ ನಟಿಸಲು ತಮಗೆ ಹೆಮ್ಮೆಯಾಗುತ್ತಿದೆ ಎಂದು ಮುನ್ನಾಭಯಿ ಎಂಬಿಬಿಎಸ್ ಖ್ಯಾತಿಯ ಸಂಜಯ್ ದತ್ ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್‍-2 ಚಿತ್ರದಲ್ಲಿ ನಟಿಸಲು ತಮಗೆ ಅವಕಾಶ ನೀಡಿದ್ದಕ್ಕಾಗಿ ಸಂಜಯ್ ದತ್ ಚಿತ್ರತಂಡಕ್ಕೆ ಧನ್ಯವಾದಗ್ಳನ್ನು ತಿಳಿಸಿದ್ದಾರೆ.

ಸೋಮವಾರ (ಜು.29) ಸಂಜಯ್ ದತ್ ಅವರ ಜನ್ಮದಿನವಾಗಿದ್ದು ಅಂದೇ ಚಿತ್ರತಮಡ ಅವರ ಅಧೀರನ ಪಾತ್ರದ ಮೊದಲ ಚಿತ್ರತುಣುಕನ್ನು ಬಿಡುಗಡೆ ಮಾಡಿತು.

ಕೆಜಿಎಫ್ ಚಾಪ್ಟರ್ 1ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ‘ಅಧೀರ’ ಪಾತ್ರವನ್ನು ಕೆಲ ನಿಮಿಷಗಳ ಕಾಲ ತೋರಿಸಿದ್ದರಾದರೂ ಆ ಪಾತ್ರವನ್ನು ನಿರ್ವಹಿಸುವವರು ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಮೊದಲ ಅವತರಣಿಕೆಗಿಂತ ಹೆಚ್ಚು ಭವ್ಯವಾಗಿ ಚಿತ್ರಿತವಾಗುತ್ತಿರುವ ಎರಡನೇ ಭಾಗದಲ್ಲಿ ದೊಡ್ಡ ಬಾಲಿವುಡ್ ಸ್ಟಾರ್‍ ನಡಿಸುವ ಬಗ್ಗೆ ಖಚಿತತೆ ಇತ್ತು. ಈಗ ಸಂಜಯ್ ದತ್ ಆಗಮನದೊಂದಿಗೆ ಅದು ನಿಜವಾಗಿದೆ. ಈ ಚಿತ್ರದಲ್ಲಿ ರವೀನಾ ಟಂಡನ್ ಸಹ ಅಭಿನಯಿಸುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...