drown ಗಣೇಶ ವಿಸರ್ಜನೆಗೆಂದು ಹೋದ ಆರು ಮಕ್ಕಳು ನೀರುಪಾಲು

drown
file photo

drown ಕೋಲಾರದ ಮರದಘಟ್ಟದಲ್ಲಿ ಸಂಭವಿಸಿದ ದುರ್ಘಟನೆ

ಕೋಲಾರ: ಗಣೇಶ ಮೂರ್ತಿ ವಿಷರ್ಜನೆ ವೇಳೆ ಸಂಭವಿಸಿದ ಅವಘಡದಲ್ಲಿ ಆರು ಮಂದಿ ಮಕ್ಕಳು ( drown ) ನೀರುಪಾಲಾದ ಘಟನೆ ಕೋಲಾರದಿಂದ ವರದಿಯಾಗಿದೆ. ತಾವೇ ತಯಾರಿಸಿಸ ಪೂಜಿಸಿದ್ದ ಮೂರ್ತಿಯನ್ನು ವಿಸರ್ಜಿಸಲೆಂದು ಹೋದಾಗ ಮಕ್ಕಳು ನೀರುಪಾಲಾಗಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಪುತ್ರಿಗೂ ಇಡಿ ಸಮನ್ಸ್, ಶುಕ್ರವಾರ ಹಾಜರಿಗೆ ಸೂಚನೆ

ಕೋಲಾರದ ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೊಹರಂ ರಜೆ ಇದ್ದ ಹಿನ್ನಲೆ ಕೆರೆಯಿಂದ ಮಣ್ಣು ತಂದು ಗಣೇಶ ತಯಾರಿಸಿದ್ದ ವಿದ್ಯಾರ್ಥಿಗಳು ಪೂಜೆ ಬಳಿಕ ಕೆರೆಯಲ್ಲಿ ಬೀಡಲು ಹೋದಾಗ ನೀರು ಪಾಲಾದರು.

ಈ ಅವಘಡದಲ್ಲಿ ಮೂವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಮೃತರೆಲ್ಲರೂ 12 ರಿಂದ 14 ವರ್ಷದವರು ಎನ್ನಲಾಗಿದೆ.
ಮೃತರನ್ನು ವೈಷ್ಣವಿ, ತೇಜು, ವೀಣಾ, ರೋಹಿತ್, ರಕ್ಷಿತ್ ಹಾಗೂ ಧನುಷ್ ಎಂದು ಗುರುತಿಸಲಾಗಿದೆ.

ಮೂವರು ಮಕ್ಕಳು ಕೊಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮೂವರು ಮಕ್ಕಳು ಕೋಲಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...