dks wait ಡಿಕೆಶಿ ಜಾಮೀನು: ಶನಿವಾರ ತೀರ್ಪೆಂದ ಕೋರ್ಟು

dks wait
former minister shivakumar

dks wait ವಾದ-ಪ್ರತಿವಾದ ಆಲಿಸಿ ಶನಿವಾರಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿ

ಹೊಸದಿಲ್ಲಿ: ಅಕ್ರಮ ಹಣ ಪತ್ತೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ( dks wait ) ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರ ಜಾಮೀನು ಅರ್ಜಿ ಸಂಬಂಧ ದಿಲ್ಲಿ ಹೈಕೋರ್ಟು ತನ್ನ ತೀರ್ಪನ್ನು ಶನಿವಾರಕ್ಕೆ  ಕಾಯ್ದಿರಿಸಿದೆ. ಹೀಗಾಗಿ ಡಿಕೆಶಿ ಅವರ ಜೈಲುವಾಸ ಕನಿಷ್ಟ ಶನಿವಾರದವರೆಗೆ ಮುಂದುವರಿಯುವ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: ಡಿಕೆಶಿಗೆ ಸದ್ಯ ಜಾಮೀನಿಲ್ಲ

ಡಿಕೆಶಿ ಜಾಮೀನು ನಿರಾಕರಣೆಗೆ ಇಡಿ ಹಾಗೂ ಜಾಮೀನು ನೀಡಿಕೆಗೆ ಡಿಕೆಶಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ದಿಲ್ಲಿ ಹೈಕೋರ್ಟಿನ ನ್ಯಾಯಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸದರು.

ವಿಚಾರಣೆ ಸಂಬಂಧ ತನ್ನ ವಾದ ಮಂಡಿಸಲು ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಬರಲು ವಿಳಂಬ ತಂತ್ರ ಅನುಸರಿಸಿದ್ದರಿಂದ ನ್ಯಾಯಧೀಶರು ತೀವ್ರವಾಗಿ ಗರಂ ಆದರು. ವಾದ ಮಂಡನೆಗೆ ಬಾರದಿರುವ ವಕೀಲರ ವಿರುದ್ಧ ಕೆಂಡ ಕಾರಿದ ನ್ಯಾಯಧೀಶರು ವಾದವನ್ನು ಲಿಖಿತ ರೂಪದಲ್ಲಿ ಶನಿವಾರ ಮಧ್ಯಾಹ್ನದೊಳಗೆ ನೀಡಲು ಆದೇಶಿಸಿದರು.

ವಿಚಾರಣೆ ಗುರುವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿತ್ತು. ಆದರೆ ಇಡಿ ಪರ ವಕೀಲರು ಕೋರ್ಟ್ ಹಾಲ್‌ಗೆ ಬರಲು ವಿಳಂಬ ಮಾಡಿದನ್ನು ನ್ಯಾಯಾಧಿಶರು ತೀವ್ರವಾಗಿ ಆಕ್ಷೇಪಿಸಿದರು. ಅಲ್ಲದೇ ಇಡಿಗೆ ನೋಟೀಸ್ ಜಾರಿ ಮಾಡಿದರು. ಅಲ್ಲದೇ ಕೋರ್ಟಿನ ಜೊತೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆಯನ್ನೂ ನೀಡಿದರು.

ಬಳಿಕ ನ್ಯಾಯಾಲಯಕ್ಕೆ ಧಾವಿಸಿದ ಇಡಿ ಪರ ವಕೀಲರು ವಿಚಾರಣೆ ಮುಂದುವರಿಸಲು ನ್ಯಾಯಾಧಿಶರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ತನಿಖಾಧಿಕಾರಿಗಳು ಡಿಕೆಶಿಎ ಮೇಲೆ ಮಾಡಿರುವ ಆರೋಪಗಳನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...