dks in mysore ಮೈಸೂರಲ್ಲಿ ಡಿಕೆಶಿ ಹವಾ ಬಲು ಜೋರು

dks in mysore
dks jatre in mysuru

dks in mysore ನೀವೆ ನಾಯಕರು ಎಂದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಿವಿಧ ( dks in mysore ) ದೈವಕ್ಷೇತ್ರಗಳಿಗೆ ಭೇಟಿ ನೀಡಲು ಆಗಮಿಸಿದ ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರಿಗೆ ಬೆಂಬಲಿಗರು ಅದ್ಧೂರಿಯ ಸ್ವಾಗತ ನೀಡಿ ಬರಮಾಡಿಕೊಂಡರು.

ಇದನ್ನೂ ಓದಿ: ಚನ್ನಪಟ್ಟಣದಿಂದ ಹುಣಸೂರಿಗೆ ’ಸೈನಿಕ’ ಶಿಫ್ಟ್

ಬೆಂಗಳುರಿನಿಂದ ರೈಲಿನಲ್ಲಿ ಆಗಮಿಸಿದ ಡಿಕೆಶಿ ಅವರನ್ನು ಅಭಿಮಾನಿಗಳು ತೆರೆದ ಜೀಪಿನಲ್ಲಿ ನಗರದ ಮೆರವಣಿಗೆ ನಡೆಸಿ ಬರಮಾಡಿಕೊಂಡಿದ್ದೇ ಅಲ್ಲದೇ ಸಮಾರಂಭವನ್ನು ಸಹ ಏರ್ಪಡಿಸಿದ್ದರು. ಪಕ್ಷದ ಎಲ್ಲ ಪ್ರಮುಖ ಸ್ಥಳೀಯ ನಾಯಕರು ಡಿಕೆಶಿ ಗುಣಗಾನ ಮಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಡಿಕೆಶಿ ಪಕ್ಷವನ್ನು ಮುನ್ನಡೆಸಲಿ, ನಾವು ಅವರಿಗೆ ಹೆಗಲು ಕೊಡುತ್ತೇವೆ ಎಂದು ಹೇಳಿದರು.

ಈ ಮಧ್ಯೆ ಡಿಕೆಶಿ ಟೆಂಪಲ್ ರನ್ ಮುಂದುವರಿದಿದ್ದು, ಮೈಸೂರಿನ ವಿವಿಧ ದೇವಾಲಯಗಳಿಗೆ ಅವರು ಇನ್ನೆರಡು ದಿನ ಭೇಟಿ ನೀಡಲಿದ್ದಾರೆ. ಅದ್ಧುರಿ ಸ್ವಾಗತದ ಬಳಿಕ ಡಿಕೆಶಿ ಅವರು ದಕ್ಷೀಣ ಕಾಶಿ ನಂಜನಗೂಡಿಗೆ ಭೇಟಿ ನೀಡಿ ಶ್ರೀಕಂಠೇಶ್ವರನಿಗೆ ಪೂಜೆ ಸಲ್ಲಿಸಿದರು. ನಾಳೆ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದು, ಬಳಿಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ತೆರಳಲಿದ್ದಾರೆ.

ಈ ಮಧ್ಯೆ ಸುತ್ತೂರು ಮಠಕ್ಕೆ ಡಿಕೆ ಶಿವಕುಮಾರ್‍ ಭೇಟಿ ನೀಡಬೇಕಿತ್ತಾದರೂ ಸುತ್ತೂರ ಶ್ರೀಗಳು ಪ್ರವಾಸದಲ್ಲಿರುವ ಕಾರಣ ಈ ಭೇಟಿಯನ್ನು ರದ್ದುಪಡಿಸಲಾಯಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...