dks in demand ಚುನಾವಣಾ ಪ್ರಚಾರ: ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ಭಾರೀ ಡಿಮಾಂಡ್

dks beard
former minister dk shivakumar

dks in demand ತಮ್ಮ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬರುವಂತೆ ಡಿಕೆಶಿಗೆ ಕೈ ಅಭ್ಯರ್ಥಿಗಳ ದುಂಬಾಲು

ಬೆಂಗಳೂರು: ಮುಂದಿನ ವಾರ ನಡೆಯಲಿರುವ ಉಪ ಚುನಾವಣೆಯಲ್ಲಿ ( dks in demand ) ತಮ್ಮ ಪರ ಪ್ರಚಾರ ನಡೆಸುವಂತೆ ಕಾಂಗ್ರೆಸ್ ಅಭ್ಯರ್ಥಿಗಳು ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರಿಗೆ ದುಂಬಾಲು ಬಿದ್ದಿದ್ದಾರೆ. ತಮ್ಮದೇ ಆದ ಕಾರಣಗಳಿಂದಾಗಿ ಚುನಾವಣೆಯಲ್ಲಿ ಅಷ್ಟೊಂದು ಸುತ್ತಾಟ ಮಾಡದಿರುವ ಡಿಕೆಶಿಗೆ ಈ ಬೇಡಿಕೆ ಈಡೇರಿಸುವುದೇ ಕಷ್ಟದ ಕೆಲಸವಾಗಿದೆ.

ಇದನ್ನೂ ಓದಿ: ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಪಲ್ಲಟ: ಡಿಕೆಶಿ ಗುಡುಗು

ಹಳೆ ಮೈಸೂರಿನ ಐದಾರು ಕ್ಷೇತ್ರಗಳಲ್ಲಿ ಡಿಕೆ ಶಿವಕುಮಾರ್ ಅವರು ಈಗಾಗಲೇ ಪ್ರಚಾರ ಮಾಡಿದ್ದರೂ ರಾಜ್ಯದೆಲ್ಲೆಡೆ ಅವರ ಮಿಮಚಿನ ಸಂಚಾರ, ಅಬ್ಬರ ಕಾಣದಾಗಿದೆ. ಬಳ್ಳಾರಿಯಲ್ಲಿ ಅವರು ಮಾಡಿದ ಕಮಾಲ್ ನೆನಪಿಸಿಕೊಳ್ಳುವ ಕಾಂಗ್ರೆಸ್‌ ಅಭ್ಯರ್ಥಿಗಳು ಪ್ರಚಾರ ಮಾಡಲೇಬೇಕೆಂದು ಅವರ ಮೇಲೆ ಭಾರೀ ಒತ್ತಡ ಹೇರುತ್ತಿದ್ದಾರೆ.

ಐಟಿ ಕೇಸಿನ ವಿಚಾರವಾಗಿ ಜೈಲಿಗೆ ಹೋಗಿ ಬಂದ ಮೇಲಂತೂ ಶಿವಕುಮಾರ್‍ ಅವರಿಗೆ ಒಮದು ರೀತಿಯ ಸ್ಟಾರ್‍ಗಿರಿ ಬಂದಿದೆ. ರಾಜ್ಯದೆಲ್ಲೆಡೆ ಜನ ಅವರ ಬಗ್ಗೆ ಅನುಕಂಪ ತೋರಿದ್ದಾರೆ. ಹೋದಲೆಲ್ಲ ಅವರಿಗೆ ಭರೀ ಸ್ವಾಗತ ನೀಡಿದ್ದಾರೆ. ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎನ್ನುವುದು ಅಭ್ಯರ್ಥಿಗಳ ಲೆಕ್ಕಾಚಾರವಾಗಿದೆ.

ಶಿವಕುಮಾರ್‍ ಅವರು ಈಗಾಗಲೇ ಹುಣಸೂರು, ಕೆಆರ್‍ ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಪ್ರಚಾರ ನಿರತರಾಗಿದ್ದಾರೆ. ಈ ಮಧ್ಯೆ ಡಿ.9ರ ನಂತರ ರಾಜ್ಯದಲ್ಲಿ ಹೊಸ ಸರಕಾರ ಬರಲಿದೆ ಎಂಬ ಅವರ ಮಾತು ಕೈ ಕಾರ್‍ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ.

ಕಂಗ್ರೆಸ್ ಅಭ್ಯರ್ಥಿಗಳ ಈ ಒತ್ತಡಕ್ಕೆ ಮನಿದು ಡಿಕೆಶಿ ಹಳೆ ಮಯಸೂರು ಭಾಗವನ್ನು ಬಿಟ್ಟು ಉಳೆದೆಡೆಗೂ ಪ್ರಚಾರಕ್ಕೆ ಹೋಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಪ್ರಚಾರ ಅಂತ್ಯಗೊಳ್ಳಲು ಕೇವಲ ನಾಲ್ಕು ದಿನಗಳಿದ್ದು ಡಿ.5ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...