dks hospitalised ಎದೆನೋವು: ಡಿಕೆಶಿ ದಿಢೀರ್ ಆಸ್ಪತ್ರೆಗೆ ದಾಖಲು

dks free
dk shivakumar

dks hospitalised ಮೂರು ದಿನಗಳ ಚಿಕಿತ್ಸೆ, ವಿಶ್ರಾಂತಿಗೆ ವೈದ್ಯರ ಸಲಹೆ

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್‍ ( dks hospitalised) ತೀವ್ರ ಎದೆನೋವಿನ ಕಾರಣ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಗೋಕಾಕ ಟಿಕಟ್: ಕುತೂಹಲ ಮೂಡಿಸಿದ ಕಾಂಗ್ರೆಸ್‌ ನಡೆ

ಸೋಮವಾರ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಒತ್ತಡ ಹಾಗೂ ಬಳಲಿಕೆಯಿಂದಾಗಿ ಈ ರೀತಿ ಆಗಿರಬಹುದು ಎಂದು ಹೇಳಲಾಗಿದೆ.

ಕಳೆದ ತಿಮಗಳು ಜಾಮೀನಿನ ಮೇಲೆ ತಿಹಾರ್‍ ಜೈಲಿನಿಂದ ಹೊರಬಂದ ದಿನದಿಂದಲೂ ಶಿವಕುಮಾರ್‍ ಅವರು ಎಡೆಬಿಡದ ಚಟುವಟಿಕೆ, ಪ್ರವಾಸದಲ್ಲಿ ತೊಡಗಿಸಿಕೊಂಡ ಕಾರಣ ಆರೋಗ್ಯ ಹದ ತಪ್ಪಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ ವೈದ್ಯರು ಸಂಪೂರ್ಣ ವಿಶ್ರಾಂತಿಗೆ ಸಲಹೆ ಮಾಡಿರುವ ಕಾರನ ಅಭಿಮಾನಿಗಳು ಸೇರಿದಂತೆ ಯಾರೂ ಶಿವಕುಮಾರ್ ಅವರನ್ನು ಭೇಟಿ ಮಾಡಲು ಬರಬಾರದು ಎಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...