dks hits ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಪಲ್ಲಟ: ಡಿಕೆಶಿ ಗುಡುಗು

dks hits
former minister dk shivakumar

dks hits ಉಪ ಚುನಾವಣಾ ಕಣದಲ್ಲಿ ಅಬ್ಬರಿಸಿದ ಡಿಕೆ ಶಿವಕುಮಾರ್

ಚಿಕ್ಕಬಳ್ಳಾಪುರ: ಡಿಸೆಂಬರ್‍ ಮೊದಲ ವಾರದಲ್ಲಿ ನಡೆಯಲಿರುವ ( dks hits) ಉಪ ಚುನಾವಣೆಗಳು ರಾಜ್ಯ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್‍ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಗುಡುಗಿದ ಬಿಎಸ್ವೈ, ಕಣ್ಣೀರಿಟ್ಟ ಎಚ್ಡಿಕೆ, ಎಚ್ಚರಿಸಿದ ಡಿಕೆ

ಡಿಸೆಂಬರ್ ಒಂಬತ್ತರಂದು ಮತ ಎಣಿಕೆ ಬಳಿಕ ಬರುವ ಫಲಿತಾಂಶ ಹೊಸ ರಾಜಕಿಯಕ್ಕೆ ನಾಂದಿ ಹಾಡಲಿದೆ. ಬಿಜೆಪಿ ಅಧಿಕಾರದಲ್ಲಿರುವ ಸಾಧ್ಯತೆಗಳು ಇರುವುದಿಲ್ಲ. ಹೊಸ ಸಮೀಕರಣಗಳು ಉಂಟಾಗಲಿವೆ ಎಂದು ಹೇಳುವ ಮೂಲಕ ಡಿಕೆಶಿ ಮತ್ತೆ ಕೈ-ದಳ ಮೈತ್ರಿಯ ಪರೋಕ್ಷ ಸುಳಿವು ನೀಡಿದ್ದಾರೆ.

ಅನಾರಾಗ್ಯ ಹಾಗೂ ಐಟಿ ಪ್ರಕರಣ ಸಂಬಂಧಿ ಕೆಲಸಗಳಿಂದಾಗಿ ಚುನಾವಣಾ ಪ್ರಚಾದಿಂದ ಕೋಮಸ ಅಲಕ್‌ ಆಗಿದ್ದ ಡಿಕೆ ಶಿವಕುಮಾರ್‍ ಬುಧವಾರದಿಂದ ಪ್ರಚಾರಕ್ಕೆ ಧುಮುಕಿದ್ದು ಎದುರಾಳಿಗಳಲ್ಲಿ ಆತಂಕಕ್ಕೆ ಕಾರಣರಾಗಿದ್ದಾರೆ.

ಬುಧವಾರ ಹುಣಸೂರು ಹಾಗೂ ಕೆಆರ್‍ ಪೇಟೆಯಲ್ಲಿ ಪಕ್ಷದ ಹುರಿಯಾಳುಗಳ ಪರ ಭರ್ಜರಿ ಮತ ಯಾಚನೆ ಮಾಡಿದ ಶಿವಕುಮಾರ್ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿಗೆ ತಕ್ಕ ಪಾಠ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದರು.

ಗುರುವಾರ ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಅಭ್ಯರ್ಥಿ ಆಂಜಿನಪ್ಪ ಪರ ಡಿಕೆ ಶಿವಕುಮಾರ್‍ ಭಾರೀ ಮತ ಪ್ರಚಾರ ನಡೆಸಿದರು. ಡಿ.9ರ ಬಳಿಕ ಅನರ್ಹರು ಕೇವಲ ಮಾಜಿ ಸಚಿವರಾಗಲಿದ್ದಾರೆ. ಅವರ ಅಧಿಕಾರದ ಆಸೆಗೆ ತಣ್ಣೀರು ಬೀಳಲಿದೆ ಎಂದರು.

ಈ ಮಧ್ಯೆ ಮತ ಪ್ರಚಾರದಲ್ಲಿ ಡಿಕೆ ಶಿವಕುಮಾರ್‍ ಎಂಟ್ರಿ ಕಾಂಗ್ರೆಸ್ ಕಾರ್‍ಯಕರ್ತರಲ್ಲಿ ಸಾಕಷ್ಟು ಲವಲವಿಕೆ ತುಂಬಿದ್ದು, ಪ್ರಚಾರದ ಕಣ ಜೋರು ಪಡೆದಿದೆ. ಶಿವಕುಮಾರ್‍ ಪ್ರಚಾರದಲ್ಲಿ ತೊಡಗಿಕೊಳ್ಳದೇ ತಟಸ್ಥರಾಗಿ ಉಳಿದರೇ, ಅದರ ಲಾಭ ಪಡೆಯುವ ಹವಣಿಕೆಯಲ್ಲಿದ್ದ ಅನರ್ಹ ಶಾಸಕರಿಗೆ ಈ ಬೆಳವಣಿಗೆ ಚಿಂತೆ ಮೂಡಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...