dks ಡಿಕೆಶಿಗೆ ಜಾಮೀನು ಭಾಗ್ಯ, 50 ದಿನದ ಜೈಲುವಾಸ ಅಂತ್ಯ

dks sidelined
former minister dk shivakumar

dks ಜಾಮೀನು ನೀಡಿ ದಿಲ್ಲಿ ಹೈಕೋರ್ಟಿನ ಆದೇಶ

ಹೊಸದಿಲ್ಲಿ: ಅಕ್ರಮ ಹಣ ಪತ್ತೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ( dks ) ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ಡಿಕೆಶಿ ಅವರ 50 ದಿನಗಳ ಜೈಲುವಾಸ ಕೊನೆಗೊಂಡಿದೆ.

ಇದನ್ನೂ ಓದಿ: ಡಿಕೆಶಿ ಪರ 5 ಸಾವಿರ ಪುಟಗಳ ದಾಖಲೆ ಕೊಟ್ಟ ಸುರೇಶ್

ದಿಲ್ಲಿ ಹೈಕೊರ್ಟಿನ ನ್ಯಾಯಮೂರ್ತಿ ಕೈಟ್ ಅವರು ಬುಧವಾರ ಡಿಕೆ ಶಿವಕುಂಆರ್ ಅವರಿಗೆ ಜಾಮೀನು ನೀಡುವ ಆದೇಶವನ್ನು ಪ್ರಕಟಿಸಿದರು. ಪಾಸ್‍ಪೋರ್ಟ್‍ ಒಪ್ಪಿಸಬೇಕು ಮತ್ತು 25 ಲಕ್ಷ ರೂ ಖಾತರಿ ನೀಡಬೇಕೆಂದು ಜಾಮೀನು ಮಂಜೂರು ಆದೇಶದಲ್ಲಿ ಹೇಳಲಾಗಿದೆ.

ಕಳೆದ ಗುರುವಾರ ಡಿಕೆಶಿ ಜಾಮೀನು ನಿರಾಕರಣೆಗೆ ಇಡಿ ಹಾಗೂ ಜಾಮೀನು ನೀಡಿಕೆಗೆ ಡಿಕೆಶಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ದಿಲ್ಲಿ ಹೈಕೋರ್ಟಿನ ನ್ಯಾಯಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.

5 ಸಾವಿರ ಪುಟಗಳ ದಾಖಲೆ ಸಲ್ಲಿಕೆ

ಈ ಮಧ್ಯೆ ಡಿಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಳ್ಳುಚ ಸುಮಾರು 5 ಸಾವಿರ ಪುಟಗಳ ದಾಖಲೆ ಪತ್ರಗಳನ್ನು ಅವರ ಸೋದರ, ಸಂಸದ ಡಿಕೆ ಸುರೇಶ್ ಸೋಮವಾರ ಇಡಿ ಅಧಿಕಾರಿಗಳಿಗೆ ಸಲ್ಲಿಸಿದ್ದರು.

ಇಡಿ ಅಧಿಕಾರಿಗಳ ಕೋರಿಕೆ ಮೇರೆಗೆ ವಕೀಲರೊಂದಿಗೆ ಆಗಮಿಸಿ ರಾಶಿಗಟ್ಟಲೆ ದಾಖಲೆ‌ಗಳನ್ನು ಸುರೇಶ್ ಅವರು ಸಲ್ಲಿಸಿದರು. ಡಿ.ಕೆ ಶಿವಕುಮಾರ್ ಆವರ ಆರ್ಥಿಕ ವ್ಯವಹಾರಗಳ ಕುರಿತಾದ ಸಮಗ್ರ ದಾಖಲೆಗಳನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.

ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಆದರೆ ಶಿವಕುಮಾರ್ ಬಂಧನದಲ್ಲಿದ್ದ ಕಾರಣ ದಾಖಲೆ ನೀಡಿರಲಿಲ್ಲ. ಈಗ ನಾನು ಆ ದಾಖಲೆಗಳನ್ನೆಲ್ಲ ಒದಗಿಸಿದ್ದೇನೆ. ಹೆಚ್ಚಿನ ದಾಖಲೆ ಬೇಕಾದ್ರೆ ಕೊಡ್ತಿವಿ ಎಂದು ಹೇಳಿದ್ದೇವೆ ಎಂದು ಡಿಕೆ ಸುರೇಶ್ ನುಡಿದಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...