dks donates ನೆರೆ ಪರಿಹಾರಕ್ಕೆ ೫೦ ಲಕ್ಷ ರೂ ನೀಡಿದ ಡಿಕೆ ಶಿವಕುಮಾರ್

dks donates
dk shivakumar touring flood affected belagavi

dks donates ನೆರೆ ಹಾವಳಿ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ: ಡಿಕೆಶಿ ಆಗ್ರಹ

ಬೆಳಗಾವಿ: ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡಮಟ್ಟದ ಪ್ರವಾಹಕ್ಕೆ ( dks donates ) ಈ ಸಲ ಬೆಳಗಾವಿ ಜಿಲ್ಲೆಯ ಜನತೆ ನಲುಗಿದ್ದಾರೆ. ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ನಾಡಿನ ಜನತೆಯ ನೆರವಿಗೆ ಬರಬೇಕು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನೆರೆ ಸ್ಥಿತಿ: ಪ್ರತಿಪಕ್ಷ ಸಭೆ ಕರೆಯಿರಿ: ಬಿಎಸ್ವೈಗೆ ಎಚ್ಡಿಕೆ ಆಗ್ರಹ

ಬೆಳಗಾವಿ ತಾಲೂಕಿನ ಮೋದಗಾ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ ಡಿಕೆಶಿ ಶಾಸಕರ ನಿಧಿಯಿಂದ ತಮ್ಮ ಪಾಲಿನಿಂದ 50 ಲಕ್ಷ ರು. ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಸುಮಾರು 40 ಸಾವಿರ ಕೋಟಿಗಿಂತ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಈ ಕೂಡಲೇ ರಾಜ್ಯದ ಪ್ರವಾಹದ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಆಗ್ರಹಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಪ್ರವಾಹದಲ್ಲಿ ಸೂರು ಕಳೆದುಕೊಂಡ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಸರಕಾರ ತಕ್ಷಣ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಬೆಂಗಳೂರಿಗೆ ತೆರಳಿದ ನಂತರ ನಮ್ಮೆಲ್ಲ ಶಾಸಕರ ನಿಧಿಯಿಂದ ಪರಿಹಾರ ನಿಧಿಗೆ ಹಣ ನೀಡುವ ಘೋಷಣೆ ಮಾಡುತ್ತೇನೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...