dks daughter ಡಿಕೆ ಶಿವಕುಮಾರ್ ಪುತ್ರಿಗೂ ಇಡಿ ಸಮನ್ಸ್, ಶುಕ್ರವಾರ ಹಾಜರಿಗೆ ಸೂಚನೆ

dks in tihar
former minister shivakumar

dks daughter  ಆರೋಪಿಗಳ ಸಮಕ್ಷಮ ಡಿಕೆಶಿ ವಿಚಾರಣೆ: ಅಕ್ರಮ ಹಣದ ಒಡೆತನದ ಬಗ್ಗೆ ಮುಖಾಮುಖಿ ಪ್ರಶ್ನೆ

ಹೊಸದಿಲ್ಲಿ: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ( dks daughter  ) ಹಾಜರಾಗುವಂತೆ ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರ ಪುತ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಡಿಕೆಶಿ ಬಿಡುಗಡೆ ಒತ್ತಾಯಿಸಿ ಬೀದಿಗಿಳಿದ ಒಕ್ಕಲಿಗ ಸಮುದಾಯ

ವಾಣಿಜ್ಯ ವ್ಯವಹಾರಗಳಲ್ಲಿ ಬಂಡವಾಳ ಹೂಡೊಕೆ ಸಂಬಂಧ ವಿವರಣೆ ನೀಡಲು ಶುಕ್ರವಾರ ತನ್ನ ಮುಂದೆ ಹಾಜರಾಗುವಂತೆ ಡಿಕೆ ಶಿವಕುಮಾರ್ ಅವರ ಪುತ್ರಿಗೆ ಇಡಿ ಸಮನ್ಸ್ ನೀಡಲಾಗಿದೆ.

ಇದೇ ವೇಳೆ ಸದ್ಯ ತನ್ನ ವಶದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‍ ಅವರನ್ನು ಇಡಿ ತನಿಖಾಧಿಕಾರಿಗಳು ಮಂಗಳವಾರ ಇತರ ಆರೋಪಿಗಳ ಸಮಕ್ಷಮದಲ್ಲಿ ವಿಚಾರಣೆ ನಡೆಸಿದರು.

ದಿಲ್ಲಿಯ ಮನೆಯಲ್ಲಿ ಸಿಕ್ಕ ಹಣ ಯಾರಿಗೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟತೆ ಪಡೆಯುವ ಸಲುವಾಗಿ ಪ್ರಕರಣದ ಸಹ ಆರೋಪಿಗಳನ್ನು ಡಿಕೆಶಿ ಸಮಕ್ಷಮ ವಿಚಾರಣೆಗೆ ಒಳಪಡಿಸಲಾಯಿತು.

ಈ ಹಣ ಡಿಕೆಶಿ ಅವರದ್ದು ಎಂದು ಈ ಹಿಂದೆ ಹೇಳಿಕೆ ನೀಡಿ ಈಗ ರಾಗ ಬದಲಿಸಿರುವ ಸುನೀಲ್ ಕುಮಾರ್‍, ಸಚಿನ್ ನಾರಾಯಣ್ ಹಾಗೂ ಆಂಜನೇಯ ಎಂಬುವರನ್ನು ಇಡಿ ಅಧಿಕಾರಿಗಳು ಮುಖಾಮುಖಿ ವಿಚಾರಣೆ ನಡೆಸಿದರು.

ಮೂವರನ್ನೂ ಪ್ರತ್ಯೇಕವಾಗಿ ಶಿವಕುಮಾರ್‍ ಅವರ ಸಮಕ್ಷಮದಲ್ಲಿಯೇ ವಿಚಾರಣೆ ನಡೆಸಲಾಗಿದ್ದು, ಮುಖ್ಯವಾಗಿ ಈ ಹಣದ ಒಡೆತನದ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಡಿಕೆಶಿ ಅವರ ಸೋದರ ಮತ್ತು ಸಂಸದ ಡಿಕೆ ಸುರೇಶ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡೀ ಪಕ್ಷ ಡಿಕೆಶಿ ಬೆನ್ನಿಗಿದೆ ಎಂಬ ಭರವಸೆ ನೀಡಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ ಬುಧವಾರ ಬೆಂಗಳುರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ಒಕ್ಕಲಿಗ ಸಮುದಾಯದ ಮುಖಂಡರು ಹಾಗೂ ಕೆಪಿಸಿಸಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...