diya ದಶಕದ ನಂತರ ಪತಿಯಿಂದ ಬೇರ್ಪಟ್ಟ ನಟಿ

diya
hindi actress diya mirza

diya ದಿಯಾ ಮಿರ್ಜಾ-ಸಾಹಿಲ್ ದಾಂಪತ್ಯ ಖತಂ

ಮುಂಬಯಿ: ದಶಕದ ಒಡನಾಟ ಮತ್ತು 5 ವರ್ಷದ ( diya ) ದಾಂಪತ್ಯದ ನಂತರ ಹಿಂದಿ ಚಿತ್ರನಟಿ ದಿಯಾ ಮಿರ್ಜಾ ಪತಿಯಿಂದ ಬೇರ್ಪಡುವ ನಿರ್ಧಾರ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಯಶ್ ಕೆಜಿಎಫ್-2 ಚಿತ್ರದಲ್ಲಿ ನಟಿಸಲು ಹೆಮ್ಮೆಯಾಗುತ್ತಿದೆ: ಸಂಜಯ್ ದತ್

ಕಳೆದ ವರ್ಷ ತೆರೆಕಂಡ ‘ಸಂಜು’ ಸಿನಿಮಾದಲ್ಲಿ ದಿಯಾ ನಟಿಸಿದ್ದರು. ಇದು ಅವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ. ಅವರು ವೆಬ್​ ಸಿರೀಸ್​ಗಳಲ್ಲೂ ನಟಿಸುತ್ತಿದ್ದಾರೆ.

ದಿಯಾ ಮತ್ತು ಸಾಹಿಲ್ ಸಿಂಘಾ 11 ವರ್ಷಗಳ ಹಿಂದೆ ಪರಸ್ಪರ ಸಂಧಿಸಿದ್ದರು.  ಬಳಿಕ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ನಾವು ಅನಿವಾರ್ಯವಾಗಿ ಬೇರೆ ಮಾರ್ಗ ತುಳಿಯಬೇಕಿದೆ. ನಿರಂತರವಾಗಿ ಪ್ರೀತಿ ಹಾಗೂ ಬೆಂಬಲ ತೋರಿಸುತ್ತಿರುವ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಈ ವಿಚಾರವಾಗಿ ಮತ್ತೆ ತುಟಿ ಬಿಚ್ಚದಿರಲು ಇಬ್ಬರೂ ನಿರ್ಧರಿಸಿದ್ದೇವೆ ಎಂದೂ ದಿಯಾ ಮಿರ್ಜಾ ಹೇಳಿಕೆ ನೀಡಿದ್ದಾರೆ. ತಮ್ಮಿಬ್ಬರ ಖಾಸಗಿತನಕ್ಕೆ ತೊಂದರೆ ನೀಡದಂತೆಯೂ ದಿಯಾ ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...